';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
✍ಸಿರಾಜ್ ಗಡಿಯಾರ.
ರಾಮ ಮಂದಿರ ಭವ್ಯವಾಗಿಯೇ ನಿರ್ಮಾಣಗೊಳ್ಳಬಹುದು ಭಾರತದಲ್ಲಿ,
ಸೀತೆಗೆ ರಕ್ಷಣೆ ಸಿಗಲು ಇನ್ನೆಷ್ಟು ವರ್ಷ ಕಾಯಬೇಕು.
ಮಸೀದಿ ಮಿನಾರಗಳು ಕಣ್ಣು ಕುಕ್ಕುವಂತೆ
ಎಷ್ಟು ಸಾಧ್ಯವೋ ಅಷ್ಟೆತ್ತರ ಗಗನ ಚುಂಬಿಸುವಂತೆ ನಿಂತಿದೆ,
ಮಗಳ ಮದುವೆಗೆ ಊರೂರು ತಿರುಗುವ
ತಂದೆಯ ಮುಖದಲಿ ನಗು ಮೂಡುವಂತಾಗಲು
ಇನ್ನೆಷ್ಟು ವರ್ಷ ಕಾಯಬೇಕು.
ಕಡಿ ಕೊಲ್ಲಿರೆಂದು ವೀರಾವೇಶದ ಭಾಷಣಗೈಯುವ ನಾಯಕ ,
ಆವೇಶಕೆ ಬಲಿಯಾಗಿ ಅಧರ್ಮದ ಹಾದಿ ತುಳಿವ ಅಮಾಯಕ ,
ಅಪನಂಬಿಕೆ ಮೂಡಿಸಲು ಸಂಚು ರೂಪಿಸುತ್ತಿದ್ದಾರೆ
ಭಾರತ ನುಚ್ಚುನೂರಾಗಲು ಹೆಚ್ಚೇನು ದಿನವಿಲ್ಲ,
ನಿನ್ನ ಮಗನೇಕೆ ಧರ್ಮ ರಕ್ಷಣೆಗೆ ಧುಮುಕಲಿಲ್ಲ
ನಾಯಕನ ಪ್ರಶ್ನಿಸುವ ಗಟ್ಟಿಗುಂಡಿಗೆಗೆ ಇನ್ನೆಷ್ಟು ವರ್ಷ ಕಾಯಬೇಕು.
✡️
ಜ್ಞಾನಪೀಠ, ಭಾರತ ರತ್ನ
ಗತಿಸಿ ಹೋದರು ಲೇಖನಿಯ ತುದಿಯಲಿ
ಭಾರತೀಯರನು ಬೇದ ಭಾವವಿಲ್ಲದೆ ಒಟ್ಟಾಗಿಸಿದ ಸಾಹಿತಿಗಳು,
ಆಳುವವನ ಅಡಿಯಾಳಾಗಿ ಅಧಿಕಾರದಿ ಕೂತವರ
ಅಂಡು ನೆಕ್ಕುವ ,ಲೇಖನಿಯನು ಸ್ವಕುಛ ಮರ್ಧನಕೆ
ಮಾತ್ರವೇ ಹೊರತೆಗೆಯುವ ಸಾಹಿತಿ
ಮನಸು ಬದಲಾಗಲು ಇನ್ನೆಷ್ಟು ವರ್ಷ ಕಾಯಬೇಕು.