ಪುತ್ತೂರು: ಹಾಸನದಲ್ಲಿ ಪ್ರಜ್ವಲ್ ರೇವಣ್ಣ ರವರ ವೀಡಿಯೋ ವೈರಲ್ ಆಗುತ್ತಿದ್ದಂತೆ ವಿದೇಶಕ್ಕೆ ಹಾರಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದ್ದು ಇದೀಗ ಜೆಡಿಎಸ್ ಪಕ್ಷದಿಂದ ಅಮಾನತು ಮಾಡಿರುವ ಘಟನೆ ಕೂಡ ನಡೆದಿದೆ.
ಇದೀಗ ಅಶ್ಲೀಲ ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಹೊರದೇಶಕ್ಕೆ ಹಾರಿದ್ದಾರೆ ಎನ್ನುವ ಮಾಹಿತಿಯ ಜೊತೆಗೆ ಅವರ ವೀಡಿಯೋ ಕೂಡ ಸಾಮಾಜಿಕ ಜಾಲ ತಾಣಗಳಲ್ಲಿ ದೇಶ ವಿದೇಶಗಳಲ್ಲಿ ವೈರಲಾಗುತ್ತಿದೆ.
ವೈರಲಾದಂತಹ ವೀಡಿಯೋ ಇದೀಗ ಕರವಾಳಿಗೆ ತಲುಪಿ ಪುತ್ತೂರಿನಲ್ಲೂ ಬಹಳ ಸದ್ದು ಮಾಡುತ್ತಿದ್ದು ಎಲ್ಲರ ಮೊಬೈಲ್ನಲ್ಲಿ ಹರಿದಾಡುತ್ತಿರುವುದಲ್ಲದೇ ಟೆಲಿಗ್ರಾಂ ಮೂಲಕ ಶೇರಿಂಗ್ ನಡೆಯುತ್ತಿರುವ ವಿಷಯ ತಿಳಿದು ಬಂದಿದ್ದು ವೀಡಿಯೋ ನೋಡುತ್ತಿರುವ ಜನ ಕ್ಯಾಕರಿಸಿ ಉಗಿತಿದ್ದಾರೆ ಎಂದು ತಿಳಿದು ಬಂದಿದೆ.
ಕಾರಣ ಈ ಚಿರ ಯುವಕ ಇಂತಹ ಕರ್ಮಕಾಂಡಕ್ಕೆ ಕೈ ಹಾಕಿದ್ದಲ್ಲದೇ ಅದನ್ನು ವೀಡಿಯೋ ಕೂಡ ಮಾಡಿ ಆನಂದಿಸಿದ್ದು ಅಸಹ್ಯ ಅನಿಸುವಂತಿದ್ದು ಕೆಲವರಂತು ” ಇಂಬೆ ಬೆ…ರ್ಸಿ ಪರಬ್ಬುಲೆನ್ಲ ಬುಡ್ತಿಜೆ ವಾ ಸೀಮೆದ ನಾಯಕೆ” ಎಂದು ಆಡಿಕೊಳ್ಳುತ್ತಿರುವ ವಿಚಾರ ಕೂಡ ಕೇಳಿ ಬಂದಿದೆ.
ಒಟ್ಟಾರೆಯಾಗಿ ಸಧ್ಯಕ್ಕೆ ಪಕ್ಷದಿಂದ ಉಚ್ಚಾಟನೆಯ ಬೆನ್ನಲ್ಲೇ ಘಟನೆ ಇನ್ನೂ ತನಿಖೆಯಿಂದ ಸತ್ಯ ಹೊರಬಂದಲ್ಲಿ ರಾಜಕೀಯಕ್ಕೆ ಮತ್ತು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಬೇಕಾದ ಎಲ್ಲಾ ಸನ್ನಿವೇಶಗಳು ಬರುವುದಂದು ಖಂಡಿತಾ ಅನ್ನಬಹುದು.