ಬೆಂಗಳೂರು: ಐಪಿಎಲ್‌ನ ಹೈ ಓಲ್ಟೆಜ್ ಪಂದ್ಯ ಇದೀಗ ಮುಕ್ತಾಯ ಗೊಂಡಿದ್ದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ ತಂಡ ನಡುವೆ ನಡೆದ ಪಂದ್ಯಕೂಟದಲ್ಲಿ ಚೆನ್ನೈ ತಂಡವನ್ನು ಸೋಲಿಸಿ ಚಾಲೆಂಜರ್ಸ್ ತಂಡವು ಪ್ಲೇ ಆಫ್ ಪ್ರವೇಶಿಸಿದರು.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿಯು ಸಿಎಸ್‌ಕೆ ತಂಡದ ವಿರುದ್ಧ ೨೭ ರನ್ನಿನಿಂದ ಜಯಭೇರಿ ಭಾರಿಸುವ ಮೂಲಕ ಪ್ಲೇ ಆಫ್ ಸುತ್ತಿಗೇರಿತು.
ಇಂದು ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ತಂಡಕ್ಕೆ ಕೊನೆಯ ಓವರಿನಲ್ಲಿ 15 ರನ್ನುಗಳ ಅಗತ್ಯವಿದ್ದು ಆದರೆ ಈ ಒಂದು ಓವರ್ನಲ್ಲಿ ಕೇವಲ ಏಳು ರನ್ನು ಗಳಿಸಿ ಪ್ಲೇ ಆಫ್ ಸುತ್ತಿಗೆ ಏರುವ ಕನಸು ನನಸಾಗಿಯೇ ಉಳಿಯಿತು.
ಮೊದಲು ಬ್ಯಾಟಿಂಗ್ ಮಾಡಿ ಬರೋಬ್ಬರಿ 218 ರನ್ನುಗಳ ಗುರಿಯನ್ನು ಆರ್‌ಸಿಬಿಯು ನೀಡಿತ್ತು. ಮತ್ತೆ ಇನ್ನಿಂಗ್ಸ್ ಆರಂಭಿಸಿ ಕೊನೆಯ ಗಳಿಗೆಯಲ್ಲಿ ಇನ್ನೇನು ಆರ್‌ಸಿಬಿ ತಂಡ ಸೋಲೋದು ಖಚಿತ ಎಂಬಂತಿದ್ದ ಪಂದ್ಯವು ಕೊನೆಯ ಓವರಿನಲ್ಲಿ ಧೋನಿ ಔಟ್ ಆಗುವ ಮೂಲಕ ಪಂದ್ಯಕೂಟದ ಚಿತ್ರಣವೇ ಬದಲಾಯಿತಲ್ಲದೇ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಜಡೇಜಾ ನಾನ್ ಸ್ಟ್ರೈಕರಿಲ್ಲಿ ಬಾಕಿಯಾದರು.
ಇನ್ನಿಂಗ್ಸ್ ನ ಮೊದಲ ಓವರ್ ನ ಮೊದಲ ಎಸೆತದಲ್ಲಿ ನಾಯಕ ಗಾಯಕ್ವಾಡ್ ವಿಕೆಟ್ ಅನ್ನು ಕಳೆದುಕೊಂಡ ಸಿಎಸ್‌ಕೆ ಅಘಾತಕಾರಿ ಆರಂಭ ಪಡೆದಿತ್ತು. ಸಚಿನ್ ರವೀಂದ್ರ 61 ರನ್ ಬಾರಿಸಿದರೆ ರವೀಂದ್ರ ಜಡೇಜಾ ಔಟಗದೇ 42ರಂದು ಅಂಜಿಕ್ಯ ರಹಾನೆ 33 ರನ್ ಹಾಗೂ ಧೋನಿ 25ರನ್ ಗಳಿಸಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಆರ್ಸಿಬಿ ತಂಡ ನಾಯಕ ಡೂಪ್ಲೆಸಿಸ್ 54 ರನ್ ವಿರಾಟ್ ಕೊಹ್ಲಿ 42ರನ್ನು ಬಾರಿಸುವ ಮೂಲಕ ಉತ್ತಮ ಆರಂಭ ನೀಡಿದ್ದರು. ಕೊನೆಗೆ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 218 ರನ್ನಗಳನ್ನು ಬಾರಿಸಿದರು. ಆರ್‌ಸಿಬಿ ತಂಡ ಬ್ಯಾಟಿಂಗ್ ನಡೆಸುತ್ತಿರುವಾಗ ಮೂರು ಓವರ್‌ಗಳಲ್ಲಿ 31 ರಂದು ಗಳಿಸಿದಾಗ ಮಳೆ ಆಗಮಿಸಿ ಪಂದ್ಯಕ್ಕೆ ಅಡ್ಡಿಯಾದರೂ ಮಳೆ ನಿಂತ ಮೇಲೆ ಬ್ಯಾಟಿಂಗ್ ಮುಂದುವರಿಸಿದ ಕೊಹ್ಲಿ ಕೇವಲ ಮೂರು ರನ್ನಿನಿಂದ ಅರ್ಧಶತಕ ವಂಚಿತರಾದರು. ಕೊಹ್ಲಿ ನಂತರ ಅಖಾಡಕ್ಕಿಳಿದ ರಜತ್ ಪಟಿದಾರ್ ನಾಲ್ಕು ಸಿಕ್ಸರ್ ಬಾರಿಸುವ ಮೂಲಕ 41 ರನ್ನು ಚಚ್ಚಿದರು. ಕೊನೆಗೂ ರ್‌ಸಿಬಿ ತಮ್ಮ ಅಭಿಮಾನಿಗಳ ಆಸೆಯನ್ನು ನಿರಾಸೆಗೊಳಿಸದೆ ಪ್ಲೇ ಆಫ್ ಸುತ್ತಿಗೆರುವ ಮೂಲಕ ಅಭಿಮಾನಿಗಳ ಅಭಿಮಾನಕ್ಕೆ ಮುನ್ನುಡಿ ಬರೆದರು.