dtvkannada

ಉಪ್ಪಿನಂಗಡಿ: ಕರ್ನಾಟಕ ರಾಜ್ಯದಿಂದ ಪ್ರಥಮವಾಗಿ ಕಾಲ್ನಡಿಗೆ ಮೂಲಕ ಮಕ್ಕಾಕ್ಕೆ ತೆರಳಿ ಹಜ್ ಕರ್ಮ ಪೂರೈಸಿದ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದ ನೌಶಾದ್ BKS ಜೂನ್ 20ರಂದು ಪೆರಿಯಡ್ಕಕ್ಕೆ ತಲುಪಲಿದ್ದು ಅವರಿಗೆ ಪೆರಿಯಡ್ಕ ಮೊಹಿಯುದ್ದೀನ್ ಜುಮಾ ಮಸೀದಿ ಮತ್ತು ಉಪ್ಪಿನಂಗಡಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪೆರಿಯಡ್ಕ ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಕೆ.ಪಿ.ಬಶೀರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಮಾತನಾಡಿ, ಪೆರಿಯಡ್ಕ ಮಸೀದಿ ಜಮಾಅತ್‍ನ ನೌಶಾದ್ BKS 2023 ಜನವರಿ 30ರಂದು ಮಸೀದಿಯಲ್ಲಿ ಪ್ರಾರ್ಥನೆ ನೆರವೇರಿಸಿ ಹೊರಟಿದ್ದರು.

ಅವರು ಕಾಲ್ನಡಿಗೆ ಮೂಲಕ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ್, ಹರಿಯಾಣ, ಡೆಲ್ಲಿ, ಉತ್ತರ ಪ್ರದೇಶ, ಪಂಜಾಬ್ ದಾಟಿ ವಾಗಾ ಬಾರ್ಡರ್ ಮೂಲಕ ಪಾಕಿಸ್ತಾನಕ್ಕೆ ಪ್ರವೇಶ ಮಾಡಿದ್ದರು.

ಆ ಬಳಿಕ ಒಮನ್, ಯು.ಎ.ಇ ಸೌದಿ ಅರೇಬಿಯಾದ ಮೂಲಕ ಒಟ್ಟು ಸುಮಾರು 8130 ಕಿಲೋ ಮೀಟರ್ ದೂರವನ್ನು ನಡಿಗೆ ಮೂಲಕ 1 ವರ್ಷ 2 ದಿವಸದಲ್ಲಿ ಕ್ರಮಿಸಿ 2024 ಫೆಬ್ರುವರಿ 8ರಂದು ಮಕ್ಕಾ ಪ್ರವೇಶಿಸಿದ್ದರು. ಅಲ್ಲಿ 4 ತಿಂಗಳು 26 ದಿವಸ ಅಲ್ಲಿಯೇ ಇದ್ದು, ಜೂ. 16ರಂದು ಪವಿತ್ರ ಹಜ್ ಕರ್ಮವನ್ನು ಮುಗಿಸಿರುತ್ತಾರೆ. ಜೂ. 19ರಂದು ರಾತ್ರಿ ಅಲ್ಲಿಂದ ಹೊರಟು ಜೂ. 20ರಂದು ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ ಎಂದು ನೌಶಾದ್ BKS ಪಯಣದ ಬಗ್ಗೆ ಕೆ.ಪಿ. ಬಶೀರ್ ವಿವರಿಸಿದರು.

ನೌಶಾದ್ ಬಗ್ಗೆ ಈ‌ ಮೊದಲು ಡಿಟಿವಿ ಕನ್ನಡ ಚಾನೆಲ್ಲಿನಲ್ಲಿ ಬಿತ್ತರಿಸಿದ ಪ್ರಕಟನೆ

ಜೂ. 20ರಂದು ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣ ತಲುಪಿಲಿರುವ ನೌಶಾದ್ BKS ಅವರನ್ನು ಪೆರಿಯಡ್ಕ ಜಮಾಅತ್ ಪದಾಧಿಕಾರಿಗಳು ಬರಮಾಡಿಕೊಳ್ಳಲಿದ್ದಾರೆ. ಉಪ್ಪಿನಂಗಡಿ ಮಸೀದಿ ಬಳಿಯಲ್ಲಿ ಉಪ್ಪಿನಂಗಡಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಸ್ವಾಗತ ಕಾರ್ಯಕ್ರಮ ನಡೆಯಲಿದ್ದು, ಆ ಬಳಿಕ ಪೆರಿಯಡ್ಕದಲ್ಲಿ ಮಸೀದಿ ಮತ್ತು ಎಸ್ಕೆಎಸ್ಸೆಸ್ಸೆಫ್ ಪೆರಿಯಡ್ಕ ಸಮಿತಿ ವತಿಯಿಂದ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೂ. 26ರಂದು ಅತೂರುನಲ್ಲಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದಲೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಕೆ.ಪಿ. ಬಶೀರ್ ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ಕ್ಲಸ್ಟರ್ ಕಾರ್ಯದರ್ಶಿ ಇಸ್ಮಾಯಿಲ್ ತಂಙಳ್, ಪೆರಿಯಡ್ಕ ಘಟಕದ ಅಧ್ಯಕ್ಷ ಶರೀಫ್, ಆತೂರು ಕ್ಲಸ್ಟರ್ ಅಧ್ಯಕ್ಷ ಸಿದ್ದಿಕ್ ಎಸ್.ಕೆ., ಪೆರಿಯಡ್ಕ ಮೊಹಿಯುದ್ದೀನ್ ಜುಮಾ ಮಸೀದಿ ಸದಸ್ಯ ಅಬ್ದುಲ್ ರಹಿಮಾನ್, ನೌಫಲ್ ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!