ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸ್ ಕಸ್ಟಡಿಯಲ್ಲಿರುವ ದರ್ಶನ್ ಸಹಿತ 17 ಆರೋಪಿಗಳನ್ನು ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಈ ಮೊದಲು ಆರು ದಿನ ಕಸ್ಟಡಿಗೆ ನೀಡಿದ್ದ ಕೋರ್ಟ್ ತದನಂತರ ಮತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲು ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಕೇಳಿಕೊಂಡಿದ್ದರು.
ಅದರಂತೆ ನ್ಯಾಯಾಲಯವು ಮತ್ತೆ ಆರೋಪಿಗಳನ್ನು ಐದು ದಿನ ಕಸ್ಟಡಿಗೆ ನೀಡಿದ್ದು ಒಟ್ಟು ಇಂದಿಗೆ ಹನ್ನೊಂದು ದಿನವಾಗಿದ್ದು ಇಂದು ಮತ್ತೆ ದರ್ಶನ್ ಮತ್ತು ಪವಿತ್ರ ಗೌಡ ಸಹಿತ ಹದಿನೇಳು ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಈ ಮಧ್ಯೆ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾಗುತ್ತಿರುವ ದೃಶ್ಯ ಏನೆಂದರೆ “ಡಿ ಬಾಸ್ ಬಿಡುಗಡೆ, ನಟ ದನ್ವೀರ್ ಜೊತೆ ಕಷ್ಟಡಿಯಲ್ಲಿರುವಾಗ ಧರಿಸಿರುವ ಅದೇ ಕಪ್ಪು ಬಣ್ಣದ ಟೀ ಶರ್ಟ್ ಜೊತೆಗೆ ದರ್ಶನ್ ರವರು ನಡೆದಾಡುತ್ತಿರುವ ದೃಶ್ಯ ವೈರಲಾಗುತ್ತಿದ್ದು ನಮ್ಮ ಬಾಸ್ ಬಿಡುಗಡೆಯಾಗಿದ್ದಾರೆ, ಅವರು ತಪ್ಪು ಮಾಡಿಲ್ಲ ಹಾಗಾಗಿ ಬಿಟ್ಟು ಬಿಟ್ರು,ಈ ತರಹದ ತಲೆಬರಹ ಕೊಟ್ಟು ಒಂದಷ್ಟು ವೀಡಿಯೋ ಫೋಟೋ ವೈರಲಾಗುತ್ತಿದೆ.
ಈಗಾಗಲೇ ಕಸ್ಟಡಿಯಲ್ಲಿರುವ ದರ್ಶನ್ ಬಗ್ಗೆ ಯಾವುದೇ ಕಾರಣಕ್ಕೂ ದರ್ಶನ್ ಬಿಡುಗಡೆಯಾಗಿಲ್ಲ ಇದೆಲ್ಲಾ ಸುಳ್ಳು ಸುದ್ದಿ ಆದಷ್ಟು ಬೇಗ ಬಿಡುಗಡೆಯಾಗಲಿದ್ದಾರೆ ಎಂದು ಅಭಿಮಾನಿಯೊಬ್ಬ ಅದಕ್ಕೆ ವಿರುದ್ಧವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಗಿಚಿಕೊಂಡಿದ್ದಾರೆ.
ಇಂದು ಕೋರ್ಟಿಗೆ ಮತ್ತೆ ಹಾಜರಾಗಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜಾಮೀನು ದೊರಕಲಿದೆ ಎನ್ನುವ ಮಾಹಿತಿ ಹರಿದಾಡುತ್ತಿದ್ದು ರೇಣುಕಾ ಸ್ವಾಮಿ ಕೊಲೆ ನಡೆಯುವ ಸಂದರ್ಭದಲ್ಲಿ ಅವರಿರಲಿಲ್ಲ ಇದರ ಬಗ್ಗೆ ಮಾಹಿತಿ ಗೊತ್ತಿರಲಿಲ್ಲ ಎನ್ನುವಂತಹ ಸುದ್ದಿ ಹರಿದಾಡುತ್ತಿದ್ದು ಯಾವುದಕ್ಕೂ ಇಂದಿನ ತೀರ್ಪು ಬಂದ ನಂತರವೇ ಏನಾಗಲಿದೆ ಎಂದು ತಿರ್ಮಾನಿಸಬೇಕಾಗಿದೆ.