ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 13 ಮಂದಿ ಆರೋಪಿಗಳಲ್ಲಿ ಈಗಾಗಲೇ ಪವಿತ್ರ ಗೌಡ ಮತ್ತು ಉಳಿದ ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿದ್ದು ಇನ್ನುಳಿದ ದರ್ಶನ್ ಸಹಿತ ಮೂರು ಮಂದಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ ಬಗ್ಗೆ ವರದಿಯಾಗಿದೆ.
ಎರಡು ದಿನಗಳ ಹಿಂದೆ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಪೊಲೀಸರ ಮನವಿಯಂತೆ ದರ್ಶನ್ ಮತ್ತು ಉಳಿದ ಮೂವರು ಆರೋಪಿಗಳನ್ನು ಇನ್ನೆರಡು ದಿನ ಕಷ್ಟಡಿಗೆ ನೀಡಬೇಕೆಂದು ಪೊಲೀಸರು ಮನವಿಯನ್ನು ಮಾಡಿಕೊಂಡಿದ್ದರು ಇದರಂತೆ ನ್ಯಾಯಾಲಯವು ದರ್ಶನ ಸಹಿತ ಮೂವರು ಆರೋಪಿಗಳನ್ನು ಪೊಲೀಸ್ ಕಷ್ಟಗಳಿಗೆ ನೀಡಿದ್ದರು.
ಈ ಸಂದರ್ಭದಲ್ಲಿ ಪವಿತ್ರ ಗೌಡ ಮತ್ತು ಉಳಿದ ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆಜ್ಞೆ ಹೊರಡಿಸಿತ್ತು ಅದರಂತೆ ಪವಿತ್ರ ಗೌಡರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿಕೊಡಲಾಗಿತ್ತು.
ಎರಡು ದಿನಗಳ ಕಸ್ ಸ್ಟಡಿ ಮುಗಿದ ದರ್ಶನ್ ಮತ್ತು ಆರೋಪಿಗಳನ್ನು ಇಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ವಾದ ವಿವಾದಗಳ ಮಂಡನೆ ನಂತರ ದರ್ಶನ್ ಸಹಿತ ಉಳಿದ ಆರೋಪಿಗಳಿಗೂ ಕೂಡ ನ್ಯಾಯಾಂಗ ಬಂದನನ್ನು ವಿಧಿಸಿ ತೀರ್ಪು ಹೊರಡಿಸಿದೆ.ಈ ನ್ಯಾಯಾಂಗ ಬಂದನವು ಜುಲೈ 6 ತನಕ ವಿಧಿಸಿದೆ ಎಂದು ತಿಳಿದುಬಂದಿದೆ.