ಬೆಳ್ತಂಗಡಿ: ತಾಲೂಕಿನ ಕರಂಬಾರು ಕ್ವಾಟ್ರಾಸ್ ಮನೆಯೊಂದರ ಜಾಗದಲ್ಲಿ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಮನೆಯವರಲ್ಲಿ ಆತಂಕ ಮೂಡಿದೆ. ಬರೋಬ್ಬರಿ 12 ಅಡಿ ಉದ್ದ ಇರುವ ಸರ್ಪ ಕ್ವಾಟ್ರಸ್ ರಾಮ್ ಕುಮಾರ್ ಅವರ ಜಾಗದಲ್ಲಿ ಕಾಣಿಸಿಕೊಂಡಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಸ್ನೇಕ್ ಜೋಯ್ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಒಂದು ಕರೆಗೆ ಕೂಡಲೇ ಸ್ಪಂದಿಸಿ ಸ್ಥಳಕ್ಕಾಗಮಿಸಿದ ಉರಗತಜ್ಞ ಜೋಯ್’ರವರಿಗೆ ಮನೆಮಂದಿ ಮೆಚ್ಚುಗೆ ಸೂಚಿಸಿದ್ದಾರೆ.