ಉಪ್ಪಿನಂಗಡಿ: ನಿನ್ನೆ ಸಂಜೆ ಉಪ್ಪಿನಂಗಡಿಯ ಕೆಮ್ಮಾರದ ತೋಡಿನಲ್ಲಿ ಹರಿಯುವ ನೀರಿಗೆ ಬಿದ್ದು ಕಣ್ಮರೆಯಾಗಿದ್ದ ಯುವಕನ ಮೃತದೇಹ ಇಂದು ಪತ್ತೆಯಾಗಿದೆ.
ಕೆಮ್ಮಾರ ನಿವಾಸಿ ಶಫೀಕ್(19) ನೀರಿನಲ್ಲಿ ಕೊಚ್ಚಿಹೋದ ಯುವಕ. ಅಗ್ನಿಶಾಮಕದಳ ಸಿಬ್ಬಂಧಿಗಳು ಊರವರ ಸಹಾಯದಿಂದ ಶೋಧ ಕಾರ್ಯ ಮಾಡಿದ್ದರೂ ಮೃತದ್ಹ ಮಾತ್ರ ಪತ್ತೆಯಾಗಿರಲಿಲ್ಲ. ಇಂದು ಶೋಧಕಾರ್ಯ ಮತ್ತೆ ಮುಂದುವರೆಸಿದ್ದು, ಸಂಜೆ ಹೊತ್ತಿಗೆ ಉಪ್ಪಿನಂಗಡಿ ನೇತ್ರಾವತಿ ಸೇತುವೆಯ ಅಡಿಯಲ್ಲಿ ಮೃತದೇಹ ಪತ್ತೆಯಾಗಿದೆ.