ಮಂಗಳೂರು: ಇಬ್ಬರು ರಿಕ್ಷಾ ಚಾಲಕರು ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಮಂಗಳೂರಿನ ರೊಸಾರಿಯೋ ಶಾಲೆಯ ಬಲಿ ನಡೆದ ಬಗ್ಗೆ ವರದಿಯಾಗಿದೆ.

ಈ ಒಂದು ದುರ್ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಗಳನ್ನು ರಿಕ್ಷಾ ಚಾಲಕರದ ರಾಜು ಮತ್ತು ದೇವರಾಜು ಎಂದು ಗುರುತಿಸಲಾಗಿದೆ.
ಮೃತಪಟ್ಟ ವ್ಯಕ್ತಿಗಳಲ್ಲಿ ಒಬ್ಬರು ಪುತ್ತೂರಿನವರು ಹಾಗೂ ಇನ್ನೊಬ್ಬರು ಸಕಲೇಶಪುರದವರು ಎಂದು ತಿಳಿದುಬಂದಿದ್ದು ಇಬ್ಬರು ಪಾಂಡೇಶ್ವರದ ರೊಸಾರಿಯೋ ಚರ್ಚ್ ಹಿಂಬದಿ ಬಾಡಿಗೆ ರೂಮಿನಲ್ಲಿ ವಾಸವಾಗಿದ್ದರು.
ಇಂದು ಬೆಳಗ್ಗೆ 5 ಗಂಟೆ ಸಮಯ ರಿಕ್ಷಾ ವಾಷ್ ಮಾಡಲು ಹೊರ ಬಂದಿದ್ದ ಸಂದರ್ಭ ರಿಕ್ಷಾ ವಾಷ್ ಮಾಡತ್ತಿರುವಾಗ ತುಂಡಾಗಿ ಬಿದ್ದ ವಿದ್ಯುತ್ ತಂತಿ ತಗುಲಿ ವಿದ್ಯುತ್ ಅಘಾತಕ್ಕೆ ಒಳಗಾಗಿದ್ದು ಇದನ್ನು ಕಂಡಂತಹ ಇನ್ನೊಬ್ಬ ಚಾಲಕ ಗೋಣಿಚೀಲ ಹಿಡಿದುಕೊಂಡು ರಕ್ಷಣೆಗೆ ಮುಂದಾಗಿದ್ದು ಈ ಸಂದರ್ಭದಲ್ಲಿ ಅವರಿಗೂ ವಿದ್ಯುತ್ ತಗುಲಿ ಮೃತಪಟ್ಟಿರಬಹುದು ಎಂದು ಪೊಲೀಸ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ.