ಕೆನ್ಸಿಂಗ್ಟನ್ ಓವಲ್ ಸ್ಟೇಡಿಯಂ ನಲ್ಲಿ ನಡೆದ ಟಿ-20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕವನ್ನು ಸೋಲಿಸಿ ಬರೋಬ್ಬರಿ 17 ವರ್ಷಗಳ ಬಳಿಕ ಟಿ-20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿಕೊಂಡಿದೆ.
ಇದಕ್ಕಿಂತ ಮುಂಚೆ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2007ರಲ್ಲಿ ದಕ್ಷಿಣ ಆಫ್ರಿಕದಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದಿದ್ದ ಭಾರತ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಅಂದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಆಡಿದ ರೋಹಿತ್ ಶರ್ಮ ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಮತ್ತೆ ವಿಶ್ವಕಪ್ ಅನ್ನು ತರುವುದರ ಮೂಲಕ ಇತಿಹಾಸ ಬರೆದಿಬಿಟ್ಟರು.
20ನೇ ಓವರ್ ಆರಂಭದಲ್ಲಿ ಸೂರ್ಯಕುಮಾರ್ ಯಾದವ್ ರವರು ಡೇವಿಡ್ ಮಿಲ್ಲರ್ ಅವರ ಬೌಂಡರಿ ಲೈನ್ ಕ್ಯಾಚ್ 2007 ರ ವಿಶ್ವಕಪ್ ನಲ್ಲಿ ಪಾಕಿಸ್ತಾನದ ಮಿಸ್ಬಾ ಕಾಲ್ ಹಕ್ ಕ್ಯಾಚ್ ಪಡೆದ ಶ್ರಿಶಾಂತ್ ಅವರನ್ನು ನೆನಪಿಸಿತು.
ಈ ಒಂದು ಕ್ಯಾಚ್ ಇಂದಿನ ಕ್ರಿಕೆಟಿನ ಚಿತ್ರಣವನ್ನೇ ಬದಲಾಯಿಸುತ್ತಾ ಬಂದಿದ್ದು ನಂತರ ಹಾರ್ದಿಕ್ ಪಾಂಡ್ಯ ರವರ ಕೊನೆಯ ಓವರ್ ಮ್ಯಾಜಿಕ್ ನಡೆಸಿದಂತಿತ್ತು.
ಕೊನೆಯ ಓವರಿನಲ್ಲಿ 16 ರನ್ನು ಅವಶ್ಯಕತೆ ಇದ್ದಾಗ ದಕ್ಷಿಣ ಆಫ್ರಿಕಾ ತಂಡವು ಐದು ವಿಕೆಟ್ ಅನ್ನು ಕಳೆದುಕೊಂಡಿತ್ತು ಆನಂತರ ಕೊನೆಯ ಓವರ್ ಎಸೆದ ಹಾರ್ದಿಕ ಪಾಂಡ್ಯದ ಬೌಲಿಂಗ್ ಮುಂದೆ ದಕ್ಷಿಣ ಆಫ್ರಿಕಾ ತಂಡವು ತಲೆಬಾಗಬೇಕಾಯಿತು.