ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ನಾಲ್ಕನೇ ಓವಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ತಂಡಕ್ಕೆ ಭರ್ಜರಿ ಗೆಲುವಾಗಿದೆ. ಟೀಂ ಇಂಡಿಯಾ 157 ರನ್’ಗಳ ಭರ್ಜರಿ ಜಯ ಸಾಧಿಸಿವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1ರ ಅಂತರದ ಮಹತ್ವದ ಮುನ್ನಡೆ ದಾಖಲಿಸಿದೆ.
ಒಂದು ಹಂತದಲ್ಲಿ ಇಂಗ್ಲೆಂಡ್ನತ್ತ ವಾಲಿದ್ದ ಪಂದ್ಯವನ್ನು ಟೀಂ ಇಂಡಿಯಾ ಬೌಲರ್ಗಳು ತಮ್ಮ ಬಿಗಿಯಾದ ಬೌಲಿಂಗ್ನಿಂದ ಭಾರತದ ಕಡೆಗೆ ತಿರುಗಿಸಿದರು. ಅದರಲ್ಲೂ ಯಾರ್ಕರ್ ಕಿಂಗ್ ಬುಮ್ರಾ ತೆಗೆದುಕೊಂಡ ಎರಡು ವಿಕೆಟ್ಗಳಾದ ಓಲಿ ಪೋಪ್ ಹಾಗೂ ಜಾನಿ ಬೈರ್ಸ್ಟೋ ವಿಕೆಟ್ಗಳು ಪಂದ್ಯದ ದಿಕ್ಕನ್ನೇ ಬದಲಿಸಿದವು. ಇದು ಸಾಲದೆಂಬಂತೆ ಭಾರತಕ್ಕೆ ಮುಳುವಾಗಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ನನ್ನು ಶಾರ್ದೂಲ್ ಠಾಕೂರ್ ಬಲಿ ಪಡೆದ ನಂತರ ಗೆಲುವು ಬಾಗಶಃ ಭಾರತದ ಬತ್ತಳಿಕೆಗೆ ಬಂದು ಬಿದ್ದಿತು.
368 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಆಂಗ್ಲರ ಪಡೆ, ಅಂತಿಮ ದಿನದಾಟದಲ್ಲಿ 92.2 ಓವರ್‌ಗಳಲ್ಲಿ 210 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಇಂಗ್ಲೆಂಡ್ ಪರ ಆರಂಭಿಕರಾದ ರೋರಿ ಬರ್ನ್ಸ್ (50) ಹಾಗೂ ಹಸೀಬ್ ಹಮೀದ್ (63) ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿರುವುದನ್ನು ಹೊರತಪಡಿಸಿದರೆ ಬೇರೆ ಯಾವ ಬ್ಯಾಟ್ಸ್‌ಮನ್ ಹೋರಾಟದ ಮನೋಭಾವ ತೋರಲಿಲ್ಲ. ನಾಯಕ ಜೋ ರೂಟ್ 36 ರನ್ ಗಳಿಸಿದರು.
ಭಾರತದ ಪರ ಉಮೇಶ್ ಯಾದವ್ ಮೂರು ಮತ್ತು ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜ ಮತ್ತು ಶಾರ್ದೂಲ್ ಠಾಕೂರ್ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು.
India go 2-1 up in the Test series 🎉#WTC23 | #ENGvIND | https://t.co/zRhnFj1Srx pic.twitter.com/IvwZE1THXB
— ICC (@ICC) September 6, 2021
ಸ್ಕೋರ್ ಪಟ್ಟಿ:
ಭಾರತ ಮೊದಲ ಇನ್ನಿಂಗ್ಸ್ 191ಕ್ಕೆ ಆಲೌಟ್ (ವಿರಾಟ್ ಕೊಹ್ಲಿ 50, ಶಾರ್ದೂಲ್ ಠಾಕೂರ್ 57, ಕ್ರಿಸ್ ವೋಕ್ಸ್ 55ಕ್ಕೆ 4 ವಿಕೆಟ್)
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 290 ರನ್ನಿಗೆ ಆಲೌಟ್ (ಒಲಿ ಪಾಪ್ 81, ಕ್ರಿಸ್ ವೋಕ್ಸ್ 50, ಉಮೇಶ್ ಯಾವದ್ 76ಕ್ಕೆ 3 ವಿಕೆಟ್)
ಭಾರತ ದ್ವಿತೀಯ ಇನ್ನಿಂಗ್ಸ್ 466ಕ್ಕೆ ಆಲೌಟ್ (ರೋಹಿತ್ ಶರ್ಮಾ 127, ಪೂಜಾರ 61, ಠಾಕೂರ್ 60, ಪಂತ್ 50, ಕ್ರಿಸ್ ವೋಕ್ಸ್ 83ಕ್ಕೆ 3 ವಿಕೆಟ್ )
ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ 210ಕ್ಕೆ ಆಲೌಟ್ (ಹಸೀಬ್ ಹಮೀದ್ 63, ರೋರಿ ಬರ್ನ್ಸ್ 50, ಉಮೇಶ್ ಯಾದವ್ 60ಕ್ಕೆ 3 ವಿಕೆಟ್ )