';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಳ್ಳಾಲ: ಕೂರತ್ ತಂಙಳ್ ರವರ ಮರಣದಿಂದ ತೆರವಾದ ಉಳ್ಳಾಲ ಖಾಝಿ ಸ್ಥಾನಕ್ಕೆ ನೂತನ ಖಾಝಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ರವರು ಆಯ್ಕೆ ಯಾಗಿದ್ದಾರೆ.
ಈ ಬಗ್ಗೆ ಖಾಝಿ ಆಯ್ಕೆಗೆ ಸಂಬಂಧಿಸಿದಂತೆ ಉಳ್ಳಾಲ ದರ್ಗಾ ವಠಾರದಲ್ಲಿ ಆದಿತ್ಯವಾರ ಮಧ್ಯಾಹ್ನ ನಡೆದ ಮಹಾಸಭೆ ಯಲ್ಲಿ ಎ.ಪಿ. ಉಸ್ತಾದ್ ಅವರನ್ನು ಉಳ್ಳಾಲ ಖಾಝಿಯಾಗಿ ನೇಮಕ ಮಾಡುವುದಾಗಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.
ಸೆಯ್ಯದ್ ಕೂರತ್ ತಂಙಳ್ ರವರ ಹಟಾತ್ ನಿಧನದಿಂದ ಕಣ್ಣೀರಿನಲ್ಲಿ ಮುಳುಗಿದ್ದ ಅವರ ಲಕ್ಷಾಂತರ ಅಭಿಮಾನಿಗಳಿಗೆ ಉಳ್ಳಾಲ ಖಾಝಿಯಾಗಿ ಎ.ಪಿ ಉಸ್ತಾದರನ್ನು ಆಯ್ಕೆ ಮಾಡಿದ್ದು ಸಂಭ್ರಮ ತಂದಿದೆ.
ಆಗಸ್ಟ್ 5ರಂದು ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕಾರ ನಡೆಯಲಿದೆ ಎಂದು ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ ಮತ್ತು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.