dtvkannada

ಕೋಸ್ಟಲ್ ಫ್ರೆಂಡ್ಸ್ ಮಂಗಳೂರು : ನೂತನ ಅಧ್ಯಕ್ಷರಾಗಿ ಷರೀಫ್ ಅಬ್ಬಾಸ್ ವಳಾಲು ಆಯ್ಕೆ

ಮಂಗಳೂರು : ಪ್ರತಿಷ್ಠಿತ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು (CFM) ಸಂಘಟನೆಯ ನೂತನ ಅಧ್ಯಕ್ಷರಾಗಿ ಷರೀಫ್ ಅಬ್ಬಾಸ್ ವಳಾಲು ಆಯ್ಕೆಯಾಗಿದ್ದಾರೆ.  CFM ಸ್ಥಾಪಕಾಧ್ಯಕ್ಷರಾಗಿರುವ ಅವರು 2024-25ನೇ ಸಾಲಿನ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ.

ದಿನಾಂಕ 20/08/24ರ ಶನಿವಾರ ನಗರದಲ್ಲಿ ನಡೆದ CFM ಸಂಘಟನೆಯ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಸಮಿತಿಯ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಸಾಜಿದ್ ಒಡೆಯರ್ ಅರ್ಕುಳ ಮತ್ತು ಅನಿವಾಸಿ ಭಾರತೀಯ ಅನ್ಸಾರ್ ಕಾಟಿಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಹಜಾಜ್ ಕಲ್ಲಡ್ಕ, ಕಾರ್ಯದರ್ಶಿಗಳಾಗಿ ಸಫ್ವಾನ್ ಕರ್ವೇಲ್ ಮತ್ತು ಸರ್ಫ್‌ರಾಜ್ ಅಬ್ಬಾಸ್, ಕೋಶಾಧಿಕಾರಿಯಾಗಿ ಸಿರಾಜ್ ಎರ್ಮಾಲ್ ಆಯ್ಕೆ ಆಗಿದ್ದಾರೆ.

ಕೋಸ್ಟಲ್ ಫ್ರೆಂಡ್ಸ್ ಮಂಗಳೂರು
ಮಾಜಿ ಅಧ್ಯಕ್ಷರು ಮತ್ತು ನೂತನ ಅಧ್ಯಕ್ಷರು

ನೂತನ ಸಮಿತಿಗೆ ಸಮೀರ್ ಲಕ್ಕಿಸ್ಟಾರ್, ಅಡ್ವಕೇಟ್ ನಜಿರ್ ಬೆದ್ರೊಡಿ ಮತ್ತು ಸಾಬೀತ್ ಕುಂಬ್ರ ನಾಮ ನಿರ್ದೇಶನಗೊಂಡಿದ್ದಾರೆ.
ಚುನಾವಣಾ ವೀಕ್ಷಕರಾಗಿ ಆಸೀಫ್ ಸೂರಲ್ಪಾಡಿ ಮತ್ತು ಮುಸ್ತಫಾ ದಮ್ಮಲೆ ಕಾರ್ಯ ನಿರ್ವಹಿಸಿದರು. ನಿರ್ಗಮಿತ ಅಧ್ಯಕ್ಷ ಇಮ್ತಿಯಾಜ್ ಎಸ್ ಎಂ ಪ್ರಾಸ್ತವಿಕ ಬಾಷಣ ಮಾಡಿದರು, ಮುನ್ನ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು.

ಗೆಳೆಯರ ಬಳಗವನ್ನು ಒಟ್ಟುಗೂಡಿಸಿಕೊಂಡ  ಸೆಲ್ಫೀ

CFM ನೋಂದಾಯಿತ ಸಂಸ್ಥೆಯಾಗಿದ್ದು, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಕ್ರೀಡೆ, ಕುಟುಂಬ ಸಮ್ಮಿಲನ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕಳೆದ ವರ್ಷ CFM  ನಡೆಸಿದ ಸಾಂತ್ವಾನದ ಸಂಚಾರ ಕಾರ್ಯಕ್ರಮ ರಾಜ್ಯದ ಗಮನ ಸೆಳೆದಿತ್ತು.

By dtv

Leave a Reply

Your email address will not be published. Required fields are marked *

error: Content is protected !!