dtvkannada

ಬೆಳ್ತಂಗಡಿ,ಸೆ05: ನೂರುಲ್ ಹುದಾ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ (ರಿ) ಲಾಯಿಲ ಹಾಗೂ ಪಾಪ್ಯುಲರ್ ಫ್ರಂಟ್‌ ಬ್ಲಡ್ ಡೋನರ್ಸ್ ಫೋರಂ ಲಾಯಿಲ ಘಟಕ ಇದರ ವತಿಯಿಂದ ಪ್ರಾದೇಶಿಕ ರಕ್ತ ಪೂರಣಾ ಕೇಂದ್ರ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ಲಾಯಿಲದ ನೂರುಲ್ ಹುದಾ ಟ್ರಸ್ಟ್ ಸಭಾ ಭವನದಲ್ಲಿ ನಡೆಯಿತು.
ನೂರುಲ್ ಹುದಾ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ಲಾಯಿಲ ಇದರ ಅಧ್ಯಕ್ಷರಾದ ಜ| ಅನ್ಸಾರ್ ತಾಜ್ ಸಭಾಧ್ಯಕ್ಷತೆ ವಹಿಸಿದ್ದರು. ನೂರುಲ್ ಹುದಾ ಜುಮಾ ಮಸೀದಿ ಖತೀಬರಾದ ಮುಹಮ್ಮದ್ ರಿಯಾಝ್ B.A ಅಹ್ಸನಿ ದುವಾ ನೆರವೇರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯರಾದ ಜ| ಶರೀಫ್ ಬೆಳಾಲ್, ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದೆ ಅಗತ್ಯವಿರುವ ವ್ಯಕ್ತಿಗೆ ಮಾಡುವ ದಾನವಾಗಿದೆ ರಕ್ತದಾನ. ರಕ್ತವು ಯಾವುದೇ ಕಾರ್ಖಾನೆಯಲ್ಲಿ ತಯಾರಿಸುವ ವಸ್ತುವಲ್ಲ ಬದಲಾಗಿ ರಕ್ತವನ್ನು ಒಬ್ಬ ದಾನಿಯ ಮೂಲಕವೇ ಸಂಗ್ರಹಿಸಲು ಸಾಧ್ಯ ಎಂದು ಶುಭವಚನವನ್ನು‌ ನೀಡಿದರು.

ವೇದಿಕೆಯಲ್ಲಿ SDPi ಜಿಲ್ಲಾ ಸಮಿತಿ ಸದಸ್ಯರಾದ ಜ| ಅಕ್ಬರ್ ಬೆಳ್ತಂಗಡಿ, ಗುರು ಎಂಟರ್’ಪ್ರೈಸಸ್ ಲಾಯಿಲ ಮಾಲಕರಾದ ಶ್ರೀ ಅಶೋಕ್ ಶೆಟ್ಟಿ, ಬ್ಲಡ್ ಡೋನರ್ಸ್ ಫೋರಂ ಲಾಯಿಲ ಅಧ್ಯಕ್ಷರಾದ ಜ| ಹಾರಿಸ್ ಇಂಡಿಯನ್, ಬ್ಲಡ್ ಡೋನರ್ಸ್ ಫೋರಂ ಲಾಯಿಲ ಘಟಕ ಪ್ರಧಾನ ಕಾರ್ಯದರ್ಶಿ ಹಕೀಂ ಲಾಯಿಲ, ಲಾಯಿಲ ನೂರುಲ್ ಹುದಾ ಜುಮಾ ಮಸೀದಿ ಅಧ್ಯಕ್ಷರಾದ ಜ| ಅಝೀಝ್, ಉಪಾಧ್ಯಕ್ಷರಾದ ಹಮೀದ್ ಮಿಲನ್ ಹಾಗೂ H.A ಕರೀಂ ಮತ್ತು ಪ್ರಧಾನ ಕಾರ್ಯದರ್ಶಿ ಸೈಯದ್ ಶಬೀರ್, ನೂರುಲ್ ಹುದಾ ಎಜುಕೇಶನ್ & ಚಾರಿಟೇಬಲ್ ಟ್ರಸ್ಟಿನ ಕೋಶಾಧಿಕಾರಿ ಜ| ಹನೀಫ್ ಮತ್ತು ಗೌರವ ಸದಸ್ಯರಾದ ಕೆ.ಅಬೂಬಕ್ಕರ್, ಕಮ್ಯುನಿಟಿ ಡೆವಲಪ್ಮೆಂಟ್ ಜಿಲ್ಲಾ ಉಸ್ತುವಾರಿ ನವಾಝ್ ಕುದ್ರಡ್ಕ, ಬ್ಲಡ್ ಡೋನರ್ಸ್ ಫೋರಂ ಬೆಳ್ತಂಗಡಿ ಘಟಕ ಅಧ್ಯಕ್ಷ ಇಸ್ಮಾಯಿಲ್ ಐ ಬಿ ಹಾಗೂ ಬ್ಲಡ್ ಡೋನರ್ಸ್ ಫೋರಂ ಮದ್ದಡ್ಕ ಘಟಕ ಅಧ್ಯಕ್ಷ ಶಬೀರ್ ಉಪಸ್ಥಿತರಿದ್ದರು.
ಈ ರಕ್ತದಾನ ಶಿಬಿರದಲ್ಲಿ ಒಟ್ಟು 58 ಮಂದಿ ಜೀವದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು.

By dtv

Leave a Reply

Your email address will not be published. Required fields are marked *

error: Content is protected !!