ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ಕಮಿಟಿ ಇದರ ವಾರ್ಷಿಕ ಮಹಾಸಭೆಯು ಯೂಸುಫ್ ಹಾಜಿ ಸೂರಿಕುಮೇರು ಅಧ್ಯಕ್ಷತೆಯಲ್ಲಿ, ಸೆಪ್ಟೆಂಬರ್ 06 ರಂದು ಸೋಮವಾರ ಹಾರಿಸ್ ಯೂಸುಫ್ ರವರ ನಿವಾಸದಲ್ಲಿ ನಡೆಯಿತು. ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಅಲ್ ಫುರ್ಖಾನಿ ಮಂಜನಾಡಿ ದುಆ ನೆರವೇರಿಸಿದರು.
ಅಕ್ಬರ್ ಅಲೀ ಸಅದಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.
ಬಳಿಕ ಸಭೆಯ ಅನುಮೋದನೆ ಪಡೆದು ಕಮಿಟಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಸಿಮಿತಿಯಲ್ಲಿ ಅಧ್ಯಕ್ಷರಾಗಿ ಅಬ್ದುಲ್ ಕರೀಂ ನೆಲ್ಲಿ ಸೂರಿಕುಮೇರು, ಉಪಾಧ್ಯಕ್ಷರಾಗಿ ಹಂಝ ಕಾಯರಡ್ಕ ಸೂರಿಕುಮೇರು, ಪ್ರಧಾನ ಕಾರ್ಯದರ್ಶಿಯಾಗಿ ಸಲೀಂ ಮಾಣಿ, ಜೊತೆ ಕಾರ್ಯದರ್ಶಿಯಾಗಿ ಅಶ್ರಫ್ ಪಾರ್ಪಜೆ ಮಾಣಿ, ಕೋಶಾಧಿಕಾರಿಯಾಗಿ ಇಬ್ರಾಹಿಂ ಮುಸ್ಲಿಯಾರ್ ಹಳೀರ, ಇಸಾಬಾ ಸೆಕ್ರೆಟರಿಯಾಗಿ ಹನೀಫ್ ಸಂಕ ಸೂರಿಕುಮೇರು, ದಅವಾ ಸೆಕ್ರೆಟರಿಯಾಗಿ ಅಬ್ದುಲ್ ರಝಾಕ್ ಮದನಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಖಾದರ್ ಗುಂಡ್ಯಡ್ಕ ಬರಿಮಾರು, ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಸೂರಿಕುಮೇರು, ಅಕ್ಬರ್ ಅಲೀ ಸಅದಿ ಸೂರಿಕುಮೇರು, ಅಬ್ದುಲ್ ಫತ್ತಾಹ್ ಮಾಣಿ, ಸುಲೈಮಾನ್ ಸೂರಿಕುಮೇರು, ಯೂಸುಫ್ ಹಾಜಿ ಸೂರಿಕುಮೇರು ಎಂಬವರನ್ನು ಆಯ್ಕೆ ಮಾಡಲಾಯಿತು.
ಸೆಂಟರ್ ಕೌನ್ಸಿಲರ್‌ಗಳಾಗಿ ಹನ್ನೊಂದು ಜನರನ್ನು ನೇಮಕ ಮಾಡಲಾಯಿತು. ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಸಂಘಟನಾ ತರಬೇತಿ ನಡೆಸಿಕೊಟ್ಟರು. ಮಹಾಸಭೆಯ ವೀಕ್ಷಕರಾಗಿ ಎಸ್‌ವೈಎಸ್ ಮಾಣಿ ಸೆಂಟರ್‌ನಿಂದ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಯಾಕೂಬ್ ನಚ್ಚಬೆಟ್ಟು, ಹಬೀಬ್ ಶೇರಾ ಕಾರ್ಯ ನಿರ್ವಹಿಸಿದರು.
ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.