dtvkannada

'; } else { echo "Sorry! You are Blocked from seeing the Ads"; } ?>

ಅಬುಧಾಬಿ, ಯು ಎ ಇ : SKSSF ಅಬುಧಾಬಿ ಕರ್ನಾಟಕ ಸಮಿತಿಯ ಆಶ್ರಯದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಬೃಹತ್ ಮೀಲಾದ್ ಕಾನ್ಫರನ್ಸ್ ಸ್ವಾಗತ ಸಮಿತಿಯ ಸಭೆಯು ದಿನಾಂಕ 28/07/2024 ರಂದು ಜನಾಬ್ ಶಾಕಿರ್ ಕೂರ್ನಡ್ಕರವರ ನಿವಾಸದಲ್ಲಿ ನಡೆಯಿತು.ಜನಾಬ್ ಶಹೀರ್ ಹುದವಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಿರಿಯ ನೇತಾರ ದಿಬ್ಬ ಮೊಯ್ದೀನ್ ಹಾಜಿ ಹಾಗೂ ಒಮೇಗಾ ಗ್ರೂಪ್ ಮಾಲಕ ಮುಹಮ್ಮದ್ ಹಾಜಿಯವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಉಧ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಜನಾಬ್ ಸಯ್ಯದ್ ಅಬ್ದುಲ್ ರಹ್ಮಾನ್ ತಂಘಲ್ ಮಲಪ್ಪುರಂ ರವರು,ಅಬುಧಾಬಿ ಕರ್ನಾಟಕ ಎಸ್ ಕೆ ಎಸ್ ಎಸ್ ಎಫ್ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಶ್ಲಾಘಿಸುತ್ತಾ ಇದರ ಕಾರ್ಯವೈಖರಿಯ ಬಗ್ಗೆ ಸಂಘಟನಾ ಚತುರತೆಯನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ಮುಖ್ಯ ಅತಿಥಿಗಳಾದ ಜನಾಬ್ ದಿಬ್ಬ ಹಾಜಿಯವರು ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅತ್ಯವಶ್ಯಕ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

'; } else { echo "Sorry! You are Blocked from seeing the Ads"; } ?>

ಕಾರ್ಯಕ್ರಮದಲ್ಲಿ 2024 ರ ಕರ್ನಾಟಕ ಬೃಹತ್ ಮೀಲಾದ್ ಕಾನ್ಫರನ್ಸ್ ಸ್ವಾಗತ ಸಮಿತಿಯನ್ನು ರಚಿಸಲಾಯಿತು.ಸಮಿತಿಯ ಚಯರ್ ಮ್ಯಾನ್ ಆಗಿ ಜನಾಬ್ ಮೊಹಮ್ಮದ್ ಹಾಜಿ (ಒಮೇಗಾ) ಹಾಗೂ ಕಾರ್ಯಾಧ್ಯಕ್ಷರಾಗಿ ಶಾಕಿರ್ ಕೂರ್ನಡ್ಕ ರವರನ್ನು ಸರ್ವಾನುಮತದಿಂದ ಆರಿಸಲಾಯಿತು.

ಗೌರವಾದ್ಯಕ್ಷರಾಗಿ ಜನಾಬ್ ಅಬ್ದುಲ್ ರಹ್ಮಾನ್ ತಂಘಳ್ ಮಲಪ್ಪುರಂ, ಅಸ್ಕರ್ ಅಲಿ ತಂಙಳ್ ಕೋಲ್ಪೆ ( ದುಬೈ) ಹಾಗೂ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬರವರನ್ನು ಆಯ್ಕೆಮಾಡಲಾಯಿತು.

ಗೌರವ ಸಲಹೆಗಾರರಾಗಿ ಶಹೀರ್ ಹುದವಿ ಉಸ್ತಾದ್ ಚಿಕ್ಕಮಗಳೂರು, ಹನೀಫ್ ಹಾಜಿ ಅರಿಯಮೂಲೆ, ಬದ್ರುದ್ದೀನ್ ಕುಂಡಾಜೆ, ಶಾಫಿ ಹಾಜಿ ಪೆರುವಾಯಿ ಯವರನ್ನು ಆಯ್ಕೆಮಾಡಲಾಯಿತು.

ಕಾರ್ಯಕ್ರಮವನ್ನು ಝೈನ್ ಸಖಾಫಿ ನಿರೂಪಿಸಿದರು. ಯಹ್ಯಾ ಕೊಡ್ಲಿಪೇಟೆ ವಂದಿಸಿದರು

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

You missed

error: Content is protected !!