ಪಳ್ಳತ್ತೂರು: “ರಾಷ್ಟ್ರ ಮೇಧಾವಿಗಳು ಒಗ್ಗಟ್ಟಿನಿಂದ ಪರಸ್ಪರ ಕೈ ಕೈ ಹಿಡಿದುಕೊಂಡು ಗಳಿಸಿದ್ದಾಗಿ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ” ಎಂದು ಪಳ್ಳತ್ತೂರು ಸುನ್ನತುಲ್ ಹುದಾ ಸುನ್ನಿ ಮದ್ರಸಾದಲ್ಲಿ ಆಯೋಜಿಸಿದ ಫ್ರೀಡಂ ಕಾರ್ಯಕ್ರಮದಲ್ಲಿ ಸಂದೇಶವನ್ನು ನೀಡಲಾಯಿತು.
ಹೊಸ ಕಾಲದ ದುಷ್ಟಶಕ್ತಿಗಳನ್ನು ಸೋಲಿಸಲು ಪೂರ್ವಿಕರ ದಾರಿಯನ್ನು ಹಿಂಬಾಲಿಸಬೇಕು ಎಂದು ಕರೆಯಿಡಲಾಯಿತು. ಸುನ್ನತುಲ್ ಹುದಾ ಜಮಾಅತ್ ಕಮಿಟಿ ಜನರಲ್ ಸೆಕ್ರೆಟರಿ ಅಬ್ದುಲ್ ರಹ್ಮಾನ್ ಧ್ವಜಾರೋಹಣ ನೆರವೇರಿಸಿದರು.
ಅಬ್ದುರ್ರಹ್ಮಾನ್ ಸಖಾಫಿ ಪೂತ್ತಪ್ಪಲಂ ದೇಶಪ್ರೇಮದ ಬಗ್ಗೆ ಭಾಷಣ ನಡೆಸಿದರು. ರಾಷ್ಟ್ರಗೀತೆ, ಸತ್ಯ ಪ್ರತಿಜ್ಞೆ, ವಿವಿಧ ಭಾಷೆಗಳಲ್ಲಿ ಭಾಷಣ, ನಾಲ್ಕು ವಿಭಾಗಗಳಲ್ಲಾಗಿ ಆಝಾದೀ ಕ್ವಿಝ್, ಬಣ್ಣ ಹಚ್ಚುವ ಸ್ಪರ್ಧೆ ನಡೆಸಲಾಯಿತು.
ವಿಜೇತರಿಗೆ ಪಿಡಿಏ ಪ್ರೆಸಿಡೆಂಟ್ ಹಬೀಬ್ ಸಅದಿ ಪಳ್ಳತ್ತೂರು, ಯೂಸುಫ್ ಸಅದಿ, ಅಬ್ದುಲ್ ಖಾದಿರ್, ಮುಸಾನ್, ಅಬ್ದುಲ್ ಖಾದಿರ್ ಕೆ.ಎ, ಶಮೀರ್ ಪಳ್ಳತ್ತೂರು, ರಾಶಿದ್ ಪಳ್ಳತ್ತೂರು ಸೇರಿದ ಗಣ್ಯರು ಟ್ರೋಫಿ ನೀಡಿ ಅಭಿನಂದಿಸಿದರು. ಅಶ್ರಫ್ ಜೌಹರಿ, ಸಿನಾನ್ ಸಅದಿ, ಮುಹಮ್ಮದ್ ಮಂಞನಾಡಿ, ಅಬ್ದುಲ್ ಅಝೀಝ್, ಶರೀಫ್ ಎಂಬವರು ಮಾತನಾಡಿದರು.