ಪುತ್ತೂರು: ಕೊಂಬೆಟ್ಟು ಕಾಲೇಜು ವಿದ್ಯಾರ್ಥಿನಿಗೆ ಅನ್ಯ ಧರ್ಮದ ಯುವಕ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯನ್ನು ಪೊಲೀಸರು ಘಟನಾಸ್ಥಳಕ್ಕೆ ಕರೆದುಕೊಂಡು ಬಂದು ಸ್ಥಳ ಮಹಜರು ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಈ ವೇಳೆಯಲ್ಲೂ ವಿದ್ಯಾರ್ಥಿನಿ ತನ್ನ ಮೊದಲೇ ಹೇಳಿರುವ ಅದೇ ಹೇಳಿಕೆ ಮೇಲೆ ದೃಢವಾಗಿ ನಿಂತಿದ್ದು ಎಲ್ಲೂ ಕೂಡ ಹೇಳಿಕೆಯನ್ನು ತಿರುಚಿಲ್ಲ. ನಡೆದಿರುವ ಘಟನೆಯ ಬಗ್ಗೆ ಸ್ಪಷ್ಟವಾಗಿ ಅದೇ ನಿಲುವಿನಲ್ಲಿ ಮಹಜರು ಸ್ಥಳದಲ್ಲಿ ತನ್ನ ಹೇಳಿಕೆಯನ್ನು ನೀಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ವಸ್ತ್ರ,ಬುರ್ಖಾ ಮತ್ತು ಶಾಲಾ ಸ್ಟೇಷನರಿ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
ಈ ಮಧ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಾಯ್ಸ್ ಮೆಸೇಜ್ಗಳು ಆರ್ಟಿಕಲ್ ಬರಹಗಳು ವಿದ್ಯಾರ್ಥಿನಿಯ ವಿರುದ್ಧ ಹರಿದಾಡುತ್ತಿದ್ದು ಆದರೆ ವಿದ್ಯಾರ್ಥಿನಿ ಮತ್ತು ಅವಳ ತಂದೆ ತಾಯಿ ನಂಬುವ ದೇವರ ಮೇಲೆ ಸತ್ಯ ಹಾಕುತ್ತ “ನನ್ನ ಮಗಳು ಸುಳ್ಳು ಹೇಳುತ್ತಿಲ್ಲ. ಘಟನೆ ನಡೆದಿದ್ದು ನೂರಕ್ಕೆ ನೂರು ಸತ್ಯ ಅದು ಅಲ್ಲದೇ ಈಗಾಗಲೇ ಬರೆದು ಹರಿದಾಡುತ್ತಿರುವ ಬರಹಗಳಲ್ಲಿ ಮೂರು ದಿನಗಳ ಹಿಂದೆ ಆದಂತಹ ಗಾಯ ಮತ್ತು ಅದರ ಮೇಲೆಗೆ ಹಿಡುಸೂಡಿ ಕಡ್ಡಿಯಲ್ಲಿ ಗಾಯ ಮಾಡಿ ರಕ್ತ ಬರಿಸಿದ್ದು ಅವಳಿಗೆ ಶಾಲೆಗೆ ಹೋಗಲು ಇಷ್ಟವಿಲ್ಲ ಎಂದೆಲ್ಲಾ ಬರೆದಿದ್ದಾರೆ. ನನ್ನ ಮಗಳು ಎಲ್ಲಾ ಕಲಿಕೆಯಲ್ಲಿ ಮುಂದಿದ್ದು ಅಂತಹ ಸನ್ನಿವೇಶ ನಡೆದೆ ಇಲ್ಲ.ಅದರ ಜೊತೆಗೆ ಮೂರು ದಿನಗಳಿಂದ ನಾವು ನಮ್ಮ ಮಗಳನ್ನು ಗಮನಿಸುವುದಿಲ್ಲವೇ? ನಮಗೆ ಅಷ್ಟು ಗೊತ್ತಾಗೋದಿಲ್ಲವೇ? ನಮಗೆ ನ್ಯಾಯ ಬೇಕು ಎಂದು ವಿದ್ಯಾರ್ಥಿನಿಯ ಪೋಷಕರು ಗೊಗರೆಯುವ ಸನ್ನಿವೇಶ ಕಂಡು ಬಂದಿದೆ.
ಯಾರು ಈ ತರಹದ ಬರಹಗಳನ್ನು ಬರೆದಿದ್ದಾರೋ ಅವರ ಕುಟುಂಬಕ್ಕೆ ಇಂತಹ ಘಟನೆ ಬಂದಾಗ ಬುದ್ದಿ ಬರಬಹುದು,”ಬರೆದವರು ಸರ್ವನಾಶವಾಗಲಿ” ಹಿಡುಸೂಡಿ ಕಡ್ಡಿಯಲ್ಲಿ ಗೀರಿದ್ದು ಎಂದವನಿಗೆ ಒಂದು ದಿನ ಇದೇ ಪುತ್ತೂರಿನ ಮಣ್ಣಿನಲ್ಲಿ ಹಿಡುಸೂಡಿಯಲ್ಲೇ ಮಂಗಳಾರತಿ ಆಗಲಿದೆ ಎಂದು ಆಸ್ಪತ್ರೆಯ ಮುಂಬಾಗದಲ್ಲಿ ಅವರ ಉಳಿದ ಕುಟುಂಬಸ್ಥರು ಹಿಡಿಶಾಪ ಹಾಕುತ್ತಿರುವ ದೃಶ್ಯ ಕೂಡ ನಿನ್ನೆ ಕಂಡು ಬಂದಿದೆ.
ಇದರ ಹಿಂದೆ ಯಾವುದೋ ದುಷ್ಟ ಶಕ್ತಿಯ ಕೈವಾಡಗಳಿವೆ ಎನ್ನುವಂತಹ ಮಾತುಗಳು ವಿದ್ಯಾರ್ಥಿನಿಯ ತಂದೆ ಸಹಿತ ಕುಟುಂಬಸ್ಥರು ಹೇಳುತ್ತಿದ್ದಾರೆ ಇನ್ನೂ ಹಲವಾರು ಮಂದಿ ಸಾಮಾಜಿಕ ಜಾಲತನದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ವಿದ್ಯಾರ್ಥಿಗೆ ನ್ಯಾಯ ಬೇಕು ಎಲ್ಲಿಯಾದರೂ ಬೇರೆ ಏನಾದರೂ ದೊಡ್ಡ ಘಟನೆ ನಡೆದಿದ್ದರೆ ಯಾರು ಇದಕ್ಕೆ ಹೊಣೆ ಎನ್ನುವಂತಹ ಹಲವಾರು ಪ್ರಶ್ನೆಗಳು ಜೊತೆ ಹಲವು ಆರ್ಟಿಕಲ್ ಬರಹಗಳು ಸಾಮಾಜಿಕ ಜಾಲದಲ್ಲಿ ಹರಿದಾಡುತ್ತಿದ್ದು ಇದರ ಬಗ್ಗೆ ಕುಲಂಕುಶ ತನಿಖೆ ನಡೆಸಿ ಪರಿಹಾರ ಸಿಗಬಹುದೆಂಬ ವಿಶ್ವಾಸದಲ್ಲಿ ಸಾರ್ವಜನಿಕರಿದ್ದಾರೆ.