ಉಪ್ಪಿನಂಗಡಿ: ತೆಕ್ಕಾರು ನೂತನ ಪಂಚಾಯತ್ ಕಚೇರಿಯನ್ನು ಪಂಚಾಯತ್ ಬಿಜೆಪಿ ಸದಸ್ಯೆ ಯಮುನಾ ಎಂಬವರು ಅತಿಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿ ಪಂಚಾಯತ್ ಕಚೇರಿ ನೀಡಿದ ದೂರಿನಂತೆ ಇಂದು ನ್ಯಾಯಾಲಯ ಅದು ಅಕ್ರಮ ಎಂದು ಹೇಳಿದ್ದು. ಪಂಚಾಯತ್ ಕಚೇರಿಗೆ ಬಿಲ್ಡಿಂಗ್ ಬಿಟ್ಟು ಕೊಡುವಂತೆ ಯಮುನಾ ನಿವಾಸಕ್ಕೆ ತಾಕೀತು ಮಾಡಿದೆ.
ಇದರ ಬೆನ್ನಲ್ಲೇ ತೆಕ್ಕಾರು ಪಂಚಾಯತ್ ಕಚೇರಿ ಯಮುನಾ ನಿವಾಸದ ಬ್ಯಾನರ್ ತೆಗೆದು ಪಂಚಾಯತ್ ಕಚೇರಿ ತೆಕ್ಕಾರು ಎಂದು ನಾಮಕರಣಗೊಳಿಸಿದೆ.
ಇದೀಗ ಸ್ಥಳದಲ್ಲಿ ಜಟಾಪಟಿ ಶುರುವಾಗಿದ್ದು ಯಮುನಾ ನಿವಾಸ ಮತ್ತು ಸಾರ್ವಜನಿಕರ ನಡುವೆ ಮಾತುಕತೆ ಜಟಾಪಟಿ ನಡೆದಿದೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ತೆಕ್ಕಾರು ನೂತನ ಪಂಚಾಯತ್ ಕಟ್ಟಡವನ್ನು ಸ್ಥಳೀಯ ಬಿಜೆಪಿ ಪಂಚಾಯತ್ ಸದಸ್ಯೆ ಯಮುನಾ ಎಂಬವರು ಅತಿಕ್ರಮಣ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನ್ಯಾಯಾಲಯದ ಕದ ತಟ್ಟಿದ್ದರು ಇದೀಗ ಬಿಲ್ಡಿಂಗ್ ನ್ನು ಪಂಚಾಯತ್ ಕಚೇರಿಗೆ ಬಿಟ್ಟುಕೊಡುವಂತೆ ನ್ಯಾಯಾಲಯ ಆದೇಶ ನೀಡಿದೆ.
ಇಂದೇ ನೂತನ ಕಟ್ಟಡದಲ್ಲಿ ಕಾರ್ಯನಿರ್ವಹಿಸಲು ತೆಕ್ಕಾರು ಪಂಚಾಯತ್ ಕಚೇರಿ ಸಜ್ಜಾಗಿದ್ದು ಈ ಬಗ್ಗೆ ಕೆಲಸ ಪ್ರಗತಿಯಲ್ಲಿದೆ ಎಂದು ತೆಕ್ಕಾರು ಪಂಚಾಯತ್ ಅಧ್ಯಕ್ಷರು ಡಿ ಟಿವಿಗೆ ತಿಳಿಸಿದರು.
ನಮ್ಮ ಪಂಚಾಯತ್ ಸದಸ್ಯರು ಸಹಿತ ಸಾರ್ವಜನಿಕರು ತುಂಬಾ ಸಂಭ್ರಮದಲ್ಲಿದ್ದೇವೆ.ಇದು ತುಂಬಾ ಸಂತೋಷದ ವಿಚಾರ ನ್ಯಾಯಾಲಯದ ತೀರ್ಪುನ್ನು ಸ್ವಾಗತಿಸುತ್ತಿದ್ದೇವೆ ಎಂದು ತಮ್ಮ ಸಂಭ್ರಮವನ್ನು ಪಂಚಾಯತ್ ಅಧ್ಯಕ್ಷೆ ರಹಿಯಾನತ್ ಬಾಜಾರ ಡಿ ಟಿವಿ ಜೊತೆ ಹಂಚಿಕೊಂಡರು.
ಈ ಬಗ್ಗೆ ಡಿ ಟಿವಿ ಕನ್ನಡ ಹಲವಾರು ಬಾರೀ ಅತಿಕ್ರಮಣದ ವಿರುದ್ಧ ವರದಿ ನೀಡುತ್ತಲೇ ಬಂದಿದೆ.ಇದೀಗ ಡಿಟಿವಿ ಕನ್ನಡದ ವರದಿಗೆ ಫಲಶ್ರುತಿ ನೀಡಿದೆ.