ಕಡಬ: ದುರಸ್ಥಿಯಲ್ಲಿದ್ದ ಶಾಲೆಯ ಗೋಡೆ ಮತ್ತು ಮೆಲ್ಚಾವಣಿ ಬಿದ್ದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂತೂರುವಿನಲ್ಲಿ ನಡೆದಿದೆ.
ಹಳೆಯ ಕಟ್ಟಡದ ಗೋಡೆ ಮತ್ತು ಮೆಲ್ಚಾವಣಿ ಕುಸಿದು ಮತ್ತೊಂದು ತರಗತಿ ಒಳಗಡೆ ಬಿದ್ದಿದ್ದು ತರಗತಿಯಲ್ಲಿ ವಿದ್ಯಾರ್ಥಿಗಳು ಆಟಕೆಂದು ಮೈದಾನಕ್ಕೆ ಹೋಗಿದ್ದರಿಂದ ಸಂಭವಿಸಬಹುದಾದ ಬಾರೀ ದೊಡ್ಡ ದುರಂತವೊಂದು ತಪ್ಪಿದೆ.
ನಾಲ್ವರು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಬಲು ದೊಡ್ಡ ದುರಂತದಿಂದ ಪಾರಾಗಿದ್ದಾರೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.