dtvkannada

'; } else { echo "Sorry! You are Blocked from seeing the Ads"; } ?>

ಶಿಕ್ಷಣ ಎಂಬುದು ವ್ಯಕ್ತಿತ್ವ ವಿಕಸನದ ಅತ್ಯಂತ ಮುಖ್ಯವಾದ    ಘಟ್ಟವಾಗಿದೆ.ಮುಸ್ಲಿಂ ಹೆಣ್ಣು ಮಕ್ಕಳು ಅನೇಕರು ಶಿಕ್ಷಣದಲ್ಲಿ ಮುಂದೆ ಇದ್ದರೂ ಮದುವೆಯ ನಂತರ ತಮ್ಮ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದ ಅನೇಕ ಹೆಣ್ಣು ಮಕ್ಕಳನ್ನು ನಾವು ಕಾಣಬಹುದಾಗಿದೆ.

ಹೀಗಿರುವಲ್ಲಿ ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶದ  ಹೆಣ್ಣು ಮಗಳೊಬ್ಬಳು ಶಿಕ್ಷಣ ಪಡೆಯಲು ನಡೆದು ಬಂದ ದಾರಿಯು ಆಶ್ಚರ್ಯಕರವಾಗಿದೆ.
ತನ್ನ ಬಾಲ್ಯದಲ್ಲೇ ತನಗೆ ಬುದ್ಧಿ ಶಕ್ತಿ ಬರುವ ಮೊದಲೇ   ತಂದೆಯನ್ನು ಕಳೆದುಕೊಂಡಿರುವ ಈಕೆಯ ಹೆಸರು ಆಯಿಷಾ . ತಂದೆ ಧಾರ್ಮಿಕ ಕ್ಷೇತ್ರದಲ್ಲಿ ಗುರುಗಳಾಗಿದ್ದು, ತನ್ನ ಅಣ್ಣ  ತಂದೆಯ ಆದರ್ಶದಂತೆ ಧಾರ್ಮಿಕ ಕ್ಷೇತ್ರದಲ್ಲಿ ತೊಡೆದುಕೊಂಡಿದ್ದಾರೆ. ಕಷ್ಟದ ಸಮಯದಲ್ಲಿ ಪಿಯುಸಿ ಶಿಕ್ಷಣವನ್ನು ಪೂರೈಸಿದ ಸಂದರ್ಭದಲ್ಲಿ ಉತ್ತಮ ಸಂಬಂಧ ಮನೆಗೆ ಹುಡುಕಿಕೊಂಡು ಬಂದಾಗ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮನೆಯವರ ಆಶಯದಂತೆ  ನೌಫಲ್ ಎಂಬುವರ ಜೊತೆ ವಿವಾಹವಾಗುತ್ತಾರೆ. ನಂತರ ಒಂದು ಮಗುವಿಗೆ ಜನ್ಮ ನೀಡಿ ಸುಖ ಸಂಸಾರದಲ್ಲಿ ಇರುವಾಗ, ಆಯಿಷಾ ಎಂಬ ಹೆಣ್ಣುಮಗಳು ತನ್ನ ಗಂಡ ಹಾಗೂ ಮನೆಯವರಲ್ಲಿ ತನ್ನ ಕಲಿಕೆಯ ಕನಸನ್ನ ಹೇಳುತ್ತಾಳೆ.ಇದಕ್ಕೆ ಗಂಡನಾದ ನೌಫಲ್ ಹಾಗೂ ಅವರ ಕುಟುಂಬದವರು ಸಕಾರಾತ್ಮಕವಾಗಿ ಸ್ಪಂದಿಸಿ ತನ್ನ ಬಾಲ್ಯದ ಕನಸು ಉತ್ತಮ ವಕೀಲೆಯಾಗಬೇಕೆಂಬ ಕನಸಿಗೆ ಚಿಗುರು ಮೂಡುತ್ತದೆ.  ತನ್ನ ಶಿಕ್ಷಣವನ್ನು ಮುಂದುವರಿಸುವ ನಿಟ್ಟಿನಲ್ಲಿ  ತನ್ನ 1 ವರ್ಷ 2 ತಿಂಗಳ  ಮಗುವಿನ ಜೊತೆಗೆ ವಿವೇಕಾನಂದ ಕಾನೂನು  ಕಾಲೇಜು ಪುತ್ತೂರಿನಲ್ಲಿ ಐದು ವರ್ಷದ ಕಾನೂನು ಪದವಿ ಶಿಕ್ಷಣ ಪಡೆಯಲು ಪ್ರವೇಶ ಪಡೆದು ಪ್ರಸ್ತುತ ಐದನೇ ವರ್ಷದ ಕೊನೆಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಹೀಗೆಯೇ ಹಲವಾರು ಹೆಣ್ಣು ಮಕ್ಕಳು ಮದುವೆಯ  ನಂತರವೂ ಕೂಡ ತಮ್ಮ ಗುರಿಯನ್ನು ಸಾಧಿಸಲು ಶ್ರಮ ಪಡುತ್ತಿದ್ದಾರೆ. ಯಾವುದೇ ಹೆಣ್ಣುಮಕ್ಕಳು ತಮ್ಮ ಕನಸನ್ನು ಕನಸಾಗಿ ಮಣ್ಣು ಮಾಡುವ ಮೊದಲು ತಮ್ಮ ಹೆತ್ತವರ ಹಾಗೂ ತಮ್ಮ ಗಂಡ ಹಾಗೂ ಅವರ ಮನೆಯವರ ಬಳಿ ವ್ಯಕ್ತಪಡಿಸಿದ್ದಲ್ಲಿ ಇನ್ನೊಂದು ಆಯಿಷಾ  ನೀವು ಆಗಬಹುದು.
( ಈ ಲೇಖನದಲ್ಲಿ ವ್ಯಕ್ತಿಗಳ ಹೆಸರನ್ನು ಬದಲಿಸಲಾಗಿದೆ.)

ಬರಹ: ಮಹಮ್ಮದ್ ಅಸ್ಗರ್ ಮುಡಿಪು, ನ್ಯಾಯವಾದಿ

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!