ದೆಹಲಿ: ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ (92) ಅನಾರೋಗ್ಯ ಹಿನ್ನಲೆ ದೆಹಲಿಯ ಎಮ್ಸ್ ಆಸ್ಪತ್ರೆಯಲ್ಲಿ ಇದೀಗ ವಿಧಿವಶರಾದರು.
ಕಾಂಗ್ರೇಸ್ ನ ಸುದೀರ್ಘ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಮನ್ ಮೋಹನ್ ಸಿಂಗ್ ಸೇವೆ ಸಲ್ಲಿಸಿದ್ದರು.ರಾಷ್ಟ್ರದ ಅತೀ ದೊಡ್ಡ ಆರ್ಥಿಕ ತಜ್ಞ ಸಿಂಗ್ ರವರ ಮರಣ ರಾಷ್ಟ್ರಕ್ಕೆ ತುಂಬಲಾರದ ನಷ್ಟವೇ ಸರಿ.
ಪರಿಚಯ- ದೇಶದ ಖ್ಯಾತ ಆರ್ಥಿಕ ತಜ್ಞ ಮನ್ ಮೋಹನ್ ಸಿಂಗ್ ಇನ್ನು ನೆನಪು ಮಾತ್ರ.ಅತೀ ಹೆಚ್ಚು ಕಾಲ ಭಾರತದ ಪ್ರಧಾನಿಯಾಗಿದ್ದ ಸಿಂಗ್ ರವರು
1932 ಸೆಪ್ಟೆಂಬರ್ 26 ರಂದು ಪಶ್ಚಿಮ ಪಂಜಾಬ್ ನಲ್ಲಿ ಜನಿಸಿದರು. 2004 ರಿಂದ 2014 ರ ವರೆಗೆ ಒಂದು ದಶಕಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದವರು ಮನ್ ಮೋಹನ್ ಸಿಂಗ್ ರವರು.
ಅಂತರಾಷ್ಟ್ರೀಯ ವ್ಯಾಪಾರ ಆರ್ಥಿಕತೆಯಲ್ಲಿ ಮನ್ನಣೆ ಗೆದ್ದ ನಾಯಕ,ಭಾರತದ ಮೊದಲ ಸಿಖ್ ಪ್ರಧಾನಿ ಸಿಂಗ್ ರವರು.
ರಾಷ್ಟ್ರ ಸೇವೆಗೆ ದೃಢವಾಗಿ ನಿಂತಿದ್ದ ಬುದ್ದಿವಂತ ರಾಜಕಾರಣಿ ಮನ್ ಮೋಹನ್ ಸಿಂಗ್ ,ಮಿತ ಭಾಷಿ , ಆರ್ಥಿಕತೆಯಲ್ಲಿ ಏಮ್ಸ್ ಹೊಂದಿದ್ದ ಓರ್ವ ಶ್ರೇಷ್ಠ ನಾಯಕ ಮನ್ ಮೋಹನ್ ಸಿಂಗ್ ರವರು.
ಇಂದಿರಾ ನೆಹರು ನಂತರ ಅತೀ ಹೆಚ್ಚು ಪ್ರಧಾನಿಯಾದವರು ಸಿಂಗ್ ರವರು. 1932 ರಲ್ಲಿ ಜನಿಸಿದ ಸಿಂಗ್ ರವರು 2024 ಡಿಸೇಂಬರ್ 26 ರಂದು ವಿಧಿ ವಶರಾದರು ಅವರಿಗೆ 92 ವರ್ಷ ವಯಸ್ಸಾಗಿದೆ. ಕೇಂಬ್ರಿಡ್ಜ್ ವಿವಿಯಲ್ಲಿ ಅರ್ಥ ಶಾಸ್ತ್ರ ಟ್ರೈಪೋಸ್ ಪೂರ್ಣಗೊಳಿಸಿದ್ರು 2 ಬಾರೀ 5 ವರ್ಷಗಳ ಕಾಲ ಪ್ರಧಾನಿಯಾಗಿ ಸಿಂಗ್ ರವರು ಚುಕ್ಕಾಣಿ ಹಿಡಿದಿದ್ದಾರೆ.
ಗುರುಮೂಖ್ ಸಿಂಗ್ ಮತ್ತು ಅಮೃತ್ ಕೌರ್ ದಂಪತಿಗಳ ಪುತ್ರನಾಗಿ ಸಿಂಗ್ ಪಶ್ಚಿಮದ ಪಂಜಾಬ್ ನಲ್ಲಿ ಜನಿಸುತ್ತಾರೆ.
ಪಂಜಾಬ್ ನ ಗಾಹ್ ನಲ್ಲಿ ಜನನ, ಉರ್ದು ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದವರು ಸಿಂಗ್ ರವರು,ಪಂಜಾಬ್ , ಚಂಡಿಗಡ ವಿಶ್ವ ವಿದ್ಯಾನಿಲಯದಲ್ಲಿ ಪದವಿ ಪಡೆಯುತ್ತಾರೆ.
1957 ರಲ್ಲಿ ಅರ್ಥ ಶಾಸ್ತ್ರದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆಯುತ್ತಾರೆ. 1991 ರಲ್ಲಿ ಆರ್ಥಿಕ LPG ಜಾರಿಗೆ ತಂದ ಪ್ರಧಾನಿ ಸಿಂಗ್ ರವರು.1957 ರಿಂದ 1959 ರ ವರೆಗೆ ಅರ್ಥಶಾಸ್ತ್ರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾರೆ.