ಪುತ್ತೂರು; ಒಳಮೊಗ್ರು ಗ್ರಾಮ ಶಕ್ತಿಕೇಂದ್ರದ 160 ನೇ ಬೂತ್ ನ ಅಧ್ಯಕ್ಷರಾದ ಎಸ್ ಮಾಧವ ರೈ ಕುಂಬ್ರ ಇವರ ಮನೆಗೆ ದಿನಾಂಕ 07-09-2021 ನೇ ಮಂಗಳವಾರ ಪುತ್ತೂರಿನ ಶಾಸಕರಾದ ಶ್ರೀ ಸಂಜೀವ ಮಠಂದೂರು ಹಾಗೂ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವರವರು ಆಗಮಿಸಿ, ಬೂತ್ ಅಧ್ಯಕ್ಷರ ಮನೆಯಲ್ಲಿ ನಾಮಫಲಕ ಅಳವಡಿಸುವ ಮತ್ತು ಕಾರ್ಯಕರ್ತರ ಬೇಟಿ ಕಾರ್ಯಕ್ರಮವು ನಡೆಯಿತು .
ಒಳಮೊಗ್ರು ಗ್ರಾಮದ 160ನೇ ಬುತಿನ ಅಧ್ಯಕ್ಷರಾದ ಶ್ರೀ ಎಸ್ ಮಾಧವ ರೈ ಕುಂಬ್ರ ಇವರ ಮನೆಯಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮಕ್ಕೆ ಆಗಮಿಸಿ ಭಾರತ ಮಾತೆಯ ಎದುರು ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ಪಕ್ಷದ ಮುಖಂಡರ ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮವು ನಡೆಯಿತು.
ಮೋದಿಜಿಯ ಕನಸಿನ ಅಭಿವೃದ್ಧಿ ಕಾರ್ಯಗಳು ಯೋಜನೆಗಳು ಪುತ್ತೂರು ತಾಲೂಕಿನ ಪ್ರತಿ ಹಳ್ಳಿ ಹಳ್ಳಿಯ ಕಟ್ಟ ಕಡೆಯ ವ್ಯಕ್ತಿಗೂ ತಲುಪ ಬೇಕೆಂಬ ದ್ಯೆಯ ಹೊಂದಿರುವ ತಾಲೂಕಿನ ಎಲ್ಲ ಗ್ರಾಮಗಳು ಅಭಿವೃದ್ಧಿ ಕಾಣಬೇಕೆಂದು ಹಲವಾರು ಕೆಲಸ ಕಾರ್ಯಗಳನ್ನು ಮಾಡುತ್ತಿರುವ ಶಾಸಕರಾದ ಅಭಿವೃದ್ಧಿಯ ಹರಿಕಾರ ಶ್ರೀ ಸಂಜೀವ ಮಠಂದೂರು ಭೇಟಿ ನೀಡಿದ್ದು ಖುಷಿ ತಂದಿದೆ ಎಂದು ಮಾಧವ ರೈ ಕುಂಬ್ರ ಪತ್ರಿಕೆಗೆ ಹೇಳಿಕೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ Obc ಮೋರ್ಚಾದ ಅಧ್ಯಕ್ಷರಾದ ಆರ್ ಸಿ ನಾರಾಯಣ, ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಪಾಣಾಜೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಮಂಡಲದ ಉಪಾಧ್ಯಕ್ಷ ರಾದ ಜಯರಾಮ ಪೂಜಾರಿ, ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಮಂಜುನಾಥ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ತ್ರಿವೇಣಿ ಪಲ್ಲತ್ತಾರು, ST ಮೋರ್ಚಾದ ಅಧ್ಯಕ್ಷರಾದ ಹರೀಶ್ ಬಿಜಾತ್ರೆ, ರತನ್ ರೈ ಕುಂಬ್ರ , ಒಳಮೊಗ್ರು ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಶ್ ರೈ ಪರ್ಪುಂಜ, ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯರಾದ ಮಹೇಶ್ ರೈ ಕೇರಿ, ಪ್ರಕೋಷ್ಟ ಹಿರಿಯ ಸದಸ್ಯರಾದ ರಾಮಯ್ಯ ಗೌಡ ಬೊಳ್ಳಾಡಿ, ನಮ್ಮ ಬೂತ್ ಕಾರ್ಯದರ್ಶಿಯವರು ಸಂಜೀವ ಬೊಳ್ಳಾಡಿ, ಉಷಾ ನಾರಾಯಣ ಗೌಡ, ಉರ್ವ ಸುಂದರಿ ರೈ ಕುಂಬ್ರ, ಸುಷ್ಮಾ ಸತೀಶ್ ಕೊಡಿಬೈಲು, ಬಾಬು ಪೂಜಾರಿ ಬಡಕೋಡಿ, ಕರುಣಾ ರೈ ಬಿಜಲ, ಅರುಣ ರೈ ಬಿಜಲ, ಮೋನಪ್ಪ ಪೂಜಾರಿ ಬಡಕೋಡಿ, ಜಯಲತಾ ಬಡಕೋಡಿ, ರೋಹಿಣಿ ಬಡಕೋಡಿ, ಲಲಿತ ಕೊಡೆಂಚಾರ್, ಶೋಭಾ ಲಾಂಡ್ರಿ ಕೊಯಿಲತಡ್ಕ, ಜಯಂತಿ ವಿ ರೈ ಜಯಂತಿ ಕುಂಬ್ರ , ಸೀತಾರಾಮ ನಾಯ್ಕ್ ಶೇಕಮಲೆ, ಭಾಸ್ಕರ ಆಚಾರಿ ಸದಾಶಿವ ನಾಯ್ಕ್ ಶೇಕಮಲೆ, ಆಶಾಲತಾ ರೈ ಕುಂಬ್ರ, ರಾಜೀವಿ ಕುಂಬ್ರ, ರೇವತಿ ರೈ ಕುಂಬ್ರ, ಸುಶೀಲ ರೈ ಪ್ರೇಮಲತಾ ರೈ ಹಾಗೂ ಬಾಲಕ್ಕ ಸಂಜೀವ ಕುಂಬ್ರ ಉಪಸ್ಥಿತರಿದ್ದರು