dtvkannada

ಹಾವು ಹಿಡಿಯುವ ಕಲೆ ಅಷ್ಟು ಸುಲಭವಲ್ಲ. ಅಪಾಯಕಾರಿಯೂ ಹೌದು. ವಿಷಕಾರಿ ಹಾವು ಹಿಡಿಯುವಲ್ಲಿ ಸಾಮಾನ್ಯ ಜನರು ಎಂದೂ ಮುಂದಾಗಬಾರದು. ಪರಿಣಿತರು ಹಾಗೂ ತರಬೇತಿ ದಾರರು ಮಾತ್ರ ಹಾವು ಹಿಡಿಯುವ ಸಾಹಸಕ್ಕೆ ಮುಂದಾಗುತ್ತಾರೆ.  ಇದೀಗ ಫುಲ್ ಸುದ್ದಿಯಲ್ಲಿವ ವಿಡಿಯೋದಲ್ಲಿ ನಾಗರಹಾವು ಸ್ಕೂಟರ್ನ ಹ್ಯಾಂಡಲ್ ಒಳಗೆ ಸಿಲುಕಿಕೊಂಡಿದೆ. ಹಾವು ರಕ್ಷಕ ನೀರು ತುಂಬಿಸುವ ಪ್ಲಾಸ್ಟಿಕ್ ಕ್ಯಾನ್ನಲ್ಲಿ ಹಾವನ್ನು ತುಂಬಿದ್ದಾನೆ. ಈ ಚಮತ್ಕಾರಿ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ಒಂದು ವರ್ಷಕ್ಕಿಂತ ಹಳೆಯದಾದ ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಎರಡು ನಿಮಿಷಗಳಿರುವ ವಿಡಿಯೋ ಕ್ಲಿಪ್ನಲ್ಲಿ ಗಮನಿಸುವಂತೆ ಸ್ಕೂಟರ್ ಹ್ಯಾಂಡಲ್ನಲ್ಲಿ ಅಡಗಿ ಕುಳಿತಿದ್ದ ನಾಗರ ಹಾವನ್ನು ಬುದ್ದಿವಂತಿಕೆಯಿಂದ ಬಾಟಲಿಯ ಒಳಗೆ ಹೋಗುವಂತೆ ಮಾಡಿದ ಉರಗತಜ್ಞನ ಚಮತ್ಕಾರದ ವಿಡಿಯೋವಿದು.

ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಸಂತಾ ನಂದಾ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಫುಲ್ ವೈರಲ್ ಆಗಿದ್ದು ಹಾವು ರಕ್ಷಕನ ಕೌಶಲ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿ ಆದರೆ ನೀವೂ ಹೀಗೆಲ್ಲಾ ಮಾಡದಿರಿ.

https://twitter.com/susantananda3/status/1435218101998546949?

By dtv

Leave a Reply

Your email address will not be published. Required fields are marked *

error: Content is protected !!