ಉಪ್ಪಿನಂಗಡಿ: ಬಸ್ಸು ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೋರ್ವರ ಬ್ಯಾಗ್ ನಿಂದ 114 ಗ್ರಾಂ ಚಿನ್ನ ಎಗರಿಸಿದ ಆರೋಪದಲ್ಲಿ ಮಹಿಳೆಯೋರ್ವರನ್ನು ಬಂದಿಸಿದ ಘಟನೆ ನಿನ್ನೆ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ.
ಬಂಧಿತ ಆರೋಪಿಯನ್ನು ಪಾಂಡವಾರಕಲ್ಲು ಕೋಮಿನಡ್ಕ ನಿವಾಸಿ ನಸೀಮಾ(31) ಎಂದು ಗುರುತಿಸಲಾಗಿದೆ.
![](https://dtvkannada.in/wp-content/uploads/2025/01/IMG-20250110-WA0068-1024x951.jpg)
ಕಡಬ ತಾಲೂಕಿನ ನೆಕ್ಕಿತ್ತಡ್ಕ ನಿವಾಸಿ ಮುಸ್ತಫಾ ಅವರ ಪತ್ನಿ ಹಬೀಬಾ ಮತ್ತು ಅವರ ಭಾವನ ಪತ್ನಿ ಹಸಿರಾ ಬಾನು ಎಂಬವರ ಜೊತೆಗೆ ಮದುವೆಗೆ ತೆರಳಿದ್ದರು ಮನೆಯಲ್ಲಿದ್ದ ಸುಮಾರು 114 ಗ್ರಾಂ ಚಿನ್ನವನ್ನು ಒಂದು ಬಾಕ್ಸ್ ನಲ್ಲಿರಿಸಿ ಬ್ಯಾಗ್ ನೊಳಗೆ ಹಾಕಿ ಕೊಂಡು ಹೋಗಿದ್ದರು.
ಮದುವೆಯಿಂದ ಹಿಂದಿರುಗುವಾಗ ಬಸ್ಸಿನಲ್ಲಿ ಇವರ ಬ್ಯಾಗ್ ನ ಜಿಪ್ ತೆರದಿರುವುದಾಗಿ ತಿಳಿದು ಬಂದಿದೆ.
ತಕ್ಷಣವೇ ಚಿನ್ನ ಕಳವಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು.
ದೂರಿನ ಅನ್ವಯ ಕಳವು ಕೇಸನ್ನು ಭೇದಿಸಿದ ಉಪ್ಪಿನಂಗಡಿ ಠಾಣಾ ಸಿ ಐ ರವಿ ಮತ್ತು ಎಸ್ ಐ ಅವಿನಾಶ್ ಗೌಡ,ASI ಕವಿತಾ, ಹಿತೋಷ್,ನಾಗರಾಜ್ ,ಮೋಹನ್ ,ಗಿರೀಶ್ ಮತ್ತು ಹೇಮರಾಜ್ ತಂಡ ಉಪ್ಪಿನಂಗಡಿ ಪೇಟೆಯಲ್ಲಿ ಅಳವಡಿಸಿದ ಸಿಸಿ ಕ್ಯಾಮರಾ ಸಹಾಯದಿಂದ ನಸೀಮಾ ಎಂಬವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳವು ನಡೆಸಿದ ಬಗ್ಗೆ ಒಪ್ಪಿಕೊಂಡಿದ್ದಾರೆ.
ಈ ಹಿಂದೆಯೂ ಹಲವು ಮದುವೆ ಬಸ್ಸು ನಿಲ್ದಾಣಗಳ ಸಹಿತ ಜನ ಸಂಪರ್ಕ ಹೆಚ್ಚಿಗಿರುವ ಹಲವಾರು ಸ್ಥಳಗಳಲ್ಲಿ ಹಲವಾರು ಚಿನ್ನ ಎಗರಿಸಿದ ಆರೋಪ ಈ ಆರೋಪಿಗಿದೆ ಮೂಲತಃ ಉಪ್ಪಿನಂಗಡಿಯ ನೆಕ್ಕಿಲಾಡಿಯವಳು.
ಈ ಮೂಲಕ ಉಪ್ಪಿನಂಗಡಿ ಪೊಲೀಸರು ಕುಖ್ಯಾತಿ ಕಳ್ಳಿಯನ್ನು ಬಂಧಿಸಿದ್ದಾರೆ.
114 ಗ್ರಾಂ ಚಿನ್ನ ಸಹಿತ ಅವಳು ಬಳಸುತ್ತಿದ್ದ ಸ್ಕ್ಯೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ.