ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ SSF ತೆಕ್ಕಾರು ಶಾಖೆಯ ಮಹಾಸಭೆ ಶನಿವಾರದಂದು ನಡೆಯಿತು.ಜಮಾಅತ್ ಖತೀಬ್ ಮಜೀದ್ ಸಖಾಫಿ ದುವಾ ಆಶೀರ್ವಚನ ನೀಡಿ ಉದ್ಘಾಟಿಸಿದರು.
ಉಸ್ಮಾನ್ ಸಹದಿ ತೆಕ್ಕಾರು ಸಂಘಟನಾ ತರಗತಿ ಮಂಡಿಸಿದರು.
ಇದೇ ವೇಳೆ SSF ತೆಕ್ಕಾರು ಯುನಿಟ್ ಗೆ ನೂತನ ಸಾರಥಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಜಾಫರ್ ಕೆಪಿ, ಪ್ರ.ಕಾರ್ಯದರ್ಶಿಯಾಗಿ ಸಫ್ವಾನ್ ಕನರಾಜೆ, ಕೋಶಾಧಿಕಾರಿಯಾಗಿ ಶಕೀರ್ ಮಾಸ್ಟರ್ ಹೊಸಮೊಗ್ರು.
ಉಪಾಧ್ಯಕ್ಷರಾಗಿ ಮುಸ್ತಫಾ ಮುಈನಿ
ದಅವಾ ಕಾರ್ಯದರ್ಶಿಯಾಗಿ ರಿಳ್ವಾನ್ ಮುಈನಿ ಮೀಡಿಯಾ ಕಾರ್ಯದರ್ಶಿಯಾಗಿ ತ್ವಾಹಿರ್ ಕ್ಯಾಂಪಸ್ ಕಾರ್ಯದರ್ಶಿಯಾಗಿ:ರವೂಫ್
ಕ್ಯೂಡಿ ಕಾರ್ಯದರ್ಶಿಯಾಗಿ: ಸೌಹಾನ್
ರೈನ್ ಬೋ ಕಾರ್ಯದರ್ಶಿಯಾಗಿ: ಶಮ್ಮಾಸ್
ಜಿಡಿ ಕಾರ್ಯದರ್ಶಿಯಾಗಿ: ಆಸಿರ್ ನಸಿಫ್
ಕಾರ್ಯಕಾರಿಣಿ ಸದಸ್ಯರಾಗಿ ಬಾತಿಶ್ ಕೆ.ಪಿ ಶಾಹಿಲ್ ,ಅನ್ಸಾರ್,ಜುನೈದ್ ಬಿ.ಟಿ,ರಿಫಾಹತ್ ಟಿ.ಹೆಚ್,ಆಸಿಫ್ ಟಿಕೆ ,ಹಾದಿರ್,ಅರ್ಮಾನ್ ಶಹೀರ್ ಅಲಿ,ಉನೈಸ್ ನೂತನ ಸಾರಥಿಗಳಾಗಿ ಆಯ್ಕೆಯಾಗಿದ್ದಾರೆ.
https://youtu.be/mH-nSbueLFY?si=-YjzaJBEuc3rzCZj
SSF ಸರಳಿಕಟ್ಟೆ ಸೆಕ್ಟರ್ ನಾಯಕ ಮುಬೀನ್ ಬೈಲಮೇಲು, ಫಲ್ಲುದ್ದಿನ್ ಬಾಜಾರ ವೀಕ್ಷಕರಾಗಿ ಮಹಾಸಭೆ ಮುನ್ನಡಿಸಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಆಡಳಿತ ಸಮಿತಿ ಕಾರ್ಯದರ್ಶಿ ನಝಿರ್ ಟಿಕೆ, ಆದಂ ಟಿಜಿ, ಶರೀಫ್ ಕೆಪಿ, ಶರೀಫ್ ತಂಟ್ರಕಲ ಮತ್ತಿತ್ತರು ಉಪಸ್ಥಿತರಿದ್ದರು. ಜಾಫರ್ ಕೆಪಿ ಅಧ್ಯಕ್ಷತೆ ವಹಿಸಿದರು ಹಾಲಿ ಪ್ರಧಾನ ಕಾರ್ಯದರ್ಶಿ ಶೆಕಿರ್ ಮಾಸ್ಟರ್ ಸ್ವಾಗತಿಸಿ ವರದಿ ವಾಚನ ನಡೆಸಿದರು. ನೂತನ ಕಾರ್ಯದರ್ಶಿ ಸಫ್ವಾನ್ ಕನರಾಜೆ ವಂದಿಸಿದರು.