ಉಪ್ಪಿನಂಗಡಿ: ವಾಹನ ತಪಾಸಣೆ ವೇಳೆ ಗಾಂಜಾ ಸಾಗಿಸುತ್ತಿದ್ದ ಯುವಕನನ್ನು ಉಪ್ಪಿನಂಗಡಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಯನ್ನು ಪುತ್ತಿಲ ಗ್ರಾಮದ ಕಳಂಜಿಬೈಲ್ ನಿವಾಸಿ ಅಬ್ದುಲ್ ಸಲೀಮ್ ಎಂದು ಗುರುತಿಸಲಾಗಿದೆ.

ಉಪ್ಪಿನಂಗಡಿ ವೃತ್ತ ನಿರೀಕ್ಷಿಕರಾದ ಶ್ರೀ ರವಿ ಬಿ ಎಸ್ ರವರ ಮಾರ್ಗದರ್ಶನದಂತೆ ಉಪ್ಪಿನಂಗಡಿ ಠಾಣಾ ಪಿ ಎಸ್ ಐ. ಅವಿನಾಶ್ ಗೌಡ ಮತ್ತು ಠಾಣಾ ಸಿಬ್ಬಂದಿಗಳಾದ ನಾಗರಾಜ್, ಮಹದೇವ ವಡಗೇರಿ,. ಕಿರಣ ರಾಮನ ಗೌಡ , ಲಾಲು ಪ್ರಸಾದ್ ಸೇರಿ 34 ನೇ ನೆಕ್ಕಿಲಾಡಿಯ ರಾಷ್ಟ್ರೀಯ ಹೆದ್ದಾರಿಯ ಬೋಳ್ಳಾರ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ರಿಕ್ಷಾ ವೊಂದನ್ನು ಪರಿಶೀಲಿಸಿದ್ದು ಈ ವೇಳೆ ವಾಹನದ ಪೇಪರ್ ಗಳನ್ನು ನೀಡುವ ವೇಳೆ ರಿಕ್ಷಾ ಚಾಲಕ ಗಲಿ ಬಿಲಿ ಗೊಂಡಿದ್ದು ಇದರಿಂದ ಸಂಶಯಗೊಂಡ ಪೊಲೀಸರು ರಿಕ್ಷಾವನ್ನು ಪರಿಶೀಲಿಸಿದ್ದು ಈ ವೇಳೆ ಅಕ್ರಮವಾಗಿ ಮಾರಾಟಕ್ಕೆ ಸಾಗಿಸುತ್ತಿದ್ದ ಒಂದು ವರೆ ಕೆಜಿ ಗಾಂಜಾ ರಿಕ್ಷಾದಲ್ಲಿ ಪತ್ತೆಯಾಗಿದೆ.
ಇನ್ನಷ್ಟು ತನಿಖೆಗಾಗಿ ಚಾಲಕ ಸಲೀಮ್ ಸಹಿತ ಗಾಂಜಾ ಸಾಗಿಸಲು ಬಳಸುತ್ತಿದ್ದ ಆಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು ನ್ಯಾಯಾಲಯ ಸಲೀಮ್ ರವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.