ಬೆಳ್ತಂಗಡಿ. ಸೆ -09: ಮಹಿಳಾ ಸಿವಿಲ್ ಡಿಫನ್ಸ್ ಅಧಿಕಾರಿ ಸಾಬಿಯಾ ಸೈಫಿ ಅತ್ಯಾಚಾರ ಮತ್ತು ಬರ್ಬರ ಹತ್ಯಾ ಕೃತ್ಯವನ್ನು ಖಂಡಿಸಿ ಸೋಶಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ತಂಗಡಿ ವಿಧಾನಸಭಾ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನಸೌಧ ಎದುರುಗಡೆ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಹಾಗೂ ವಿಶೇಷ ತಂಡ ರಚಿಸಿ ಇದರ ಹಿಂದಿರುವ ಷಡ್ಯಂತ್ರವನ್ನು ಹೊರಗೆಳೆಯಬೇಕೆಂದು ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ್ದ ಹೈದರ್ ನೀರ್ಸಲ್ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷರಾದ ಮುಸ್ತಫಾ ಜಿ. ಕೆ, ಬೆಳ್ತಂಗಡಿ ವಿಧಾನಸಭಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಉಪಾಧ್ಯಕ್ಷರಾದ ಶುಕೂರ್ ಕುಪ್ಪೆಟ್ಟಿ, ಅಶ್ರಫ್ ಕಟ್ಟೆ, ನಿಜಾಮ್ ಗೇರುಕಟ್ಟೆ, ಎಸ್. ಡಿ. ಟಿ. ಯು. ತಾಲ್ಲೂಕು ಕಾರ್ಯದರ್ಶಿ ಫಾರೂಕ್ ಕ್ಯೂ ಟಿ ಎಫ್ ಮುಂತಾದವರು ಉಪಸ್ಥಿತರಿದ್ದರು.