ಬೆಂಗಳೂರು: ಗಣೇಶೋತ್ಸವ ಸಮಿತಿಯ ಭಾರೀ ಪ್ರತಿಭಟನೆಗೆ ಸರಕಾರ ಮಣಿದಿದೆ. ಗಣೇಶೋತ್ಸವ ಆಚರಣೆಗೆ ಇದ್ದ ಗೈಡ್’ಲೈನ್ಸ್ ಬದಲಾಗಿದ್ದು, ಗಣೇಶೋತ್ಸವಕ್ಕೆ 3 ದಿನವಿದ್ದ ಅವಕಾಶವನ್ನು ಗರಿಷ್ಟ 5 ದಿನಗಳಿಗೆ ಏರಿಸಲಾಗಿದೆ. ಜೊತೆಗೆ ಒಂದು ವಾರ್ಡಿನಲ್ಲಿ ಒಂದೇ ಗಣೇಶ ಪ್ರತಿಷ್ಠಾಪನೆ ಅವಕಾಶವನ್ನು ಹಿಂಪಡೆಯಲಾಗಿದೆ. ಮಾತ್ರವಲ್ಲದೆ ವೀಕೆಂಡ್ ಕರ್ಫ್ಯೂ ಹೇರಿದ್ದ ದಕ್ಷಿಣ ಕನ್ನಡ, ಕೊಡಗು, ಹಾಸನ ಸೇರಿ ಗಡಿ ಜಿಲ್ಲೆಗಳಲ್ಲಿ ಜಾರಿಯಿದ್ದ ವೀಕೆಂಡ್ ಕರ್ಫ್ಯೂ ಕೂಡ ರದ್ದುಮಾಡಿ ಆದೇಶ ಹೊರಡಿಸಲಾಗಿದೆ.
ಬಿಬಿಎಂಪಿ ಕೇಂದ್ರ ಕಛೇರಿ ಮುಂದೆ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮಾರ್ಗಸೂಚಿ ಬದಲಿಸಿ, ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಲಾಗಿತ್ತು. ಪ್ರತಿಭಟನೆಗೆ ಮಣಿದ ಸರಕಾರ ಒಂದು ವಾರ್ಡಿನಲ್ಲಿ ಒಂದಕ್ಕಿಂತ ಹೆಚ್ಚು ಗಣೇಶನ ಮೂರ್ತಿ ಕೂರಿಸಲು ಅನುಮತಿ ನೀಡಿದೆ.