ಪುತ್ತೂರು: ಹಲವಾರು ವರ್ಷಗಳಿಂದ ಕುಂಬ್ರದಲ್ಲಿ ವ್ಯಾಪಾರ ನಡೆಸುತ್ತಿದ್ದ ಅರ್ಚನಾ ಕಾಂಪ್ಲೆಕ್ಸ್ ಮಾಲಕ ಕುಂಬ್ರ ವರ್ತಕ ಸಂಘದ ಸದಸ್ಯರು ಕೂಡ ಆಗಿರುವ ಬಾಬು ಪೂಜಾರಿ ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾದರು.

ಇವರು ಕುಂಬ್ರದಲ್ಲಿ ಹಲವಾರು ವರ್ಷದಿಂದ ‘ಜ್ಯೂಸು ಬಾಬಣ್ಣ’ ಎಂದೆ ಪರಿಚಿತರಾಗಿದ್ದು ವರ್ತಕ ಸಂಘದ ಸದಸ್ಯರಾಗಿ ಕುಂಬ್ರ ವಿಶ್ವ ಯುವಕ ಮಂಡಲದ ಸದಸ್ಯರಾಗಿ ಒಳಮೊಗರು ಗ್ರಾಮದ ಹಿರಿಯ ಬಿಜೆಪಿ ಕಾರ್ಯಕರ್ತರಾಗಿ ಶ್ರೀರಾಮ ಭಜನಾ ಮಂದಿರ ಕುಂಬ್ರ ಇದರ ಮಾಜಿ ಅಧ್ಯಕ್ಷರು ಕೂಡ ಹಾಗೆ ಕಾರ್ಯನಿರ್ವಹಿಸಿದ್ದರು.
ಇವರ ಅಂಗಡಿಗೆ ತೆರಳಿದ ಪ್ರತಿಯೊಬ್ಬರಿಗೂ ಇವರ ಕಬ್ಬಿನ ಜ್ಯೂಸು,ಪುನರ್ಪುಳಿ ಹಾಗೂ ಇವರ ಕಾರ ಕಾರ ಫೇಮಸ್ ಮಜ್ಜಿಗೆ ಕುಡಿಯದೆ ಹೊರ ಬರಲು ಕಷ್ಟವಾಗುತ್ತಿತ್ತು ಅಷ್ಟೊಂದು ರುಚಿಕರವಾದ ಜ್ಯೂಸನ್ನು ಬಾಬಣ್ಣನವರು ನಗುಮುಖದಿಂದ ಮಾಡಿ ಕೊಡುತ್ತಿದ್ದರು. ಹಠತ್ತಾಗಿ ಇವರ ಮರಣ ವಾರ್ತೆ ಕೇಳಿ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ.
ಮೃತರು ಪತ್ನಿ ಸೀತಮ್ಮ ಪುತ್ರರಾದ ಅನಿಲ್ ಕುಮಾರ್ ಅಶೋಕ್ ಕುಮಾರ್ ಹಾಗೂ ಪುತ್ರಿ ಅರ್ಚನಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.