ಮಂಗಳೂರು: ರಾಜ್ಯದಲ್ಲಿ ಕೋಮು ಸೌಹಾರ್ದ ಕೆಡವಲು ಸಂಘ ಪರಿವಾರದ ಗೂಂಡಾಗಳನ್ನು ಸ್ವಯಂ ಪ್ರೇರಿತ ಕೇಸು ದಾಖಲಿಸಿ ಬಂಧಿಸಿ ದಕ್ಷಿಣ ಕನ್ನಡದ ಕರಾವಳಿಯನ್ನು ರಕ್ಷಿಸಬೇಕೆಂದು ಎಸ್.ಡಿ.ಪಿ.ಐ ಮಂಗಳೂರು ಜಿಲ್ಲಾ ಉಪಾದ್ಯಕ್ಷ ಅಶ್ರಪ್ ಅಡ್ಡೂರು ರವರು ಆಗ್ರಹಿಸಿದ್ದಾರೆ.

“ಕದ್ರಿ ಮಂಜುನಾಥ ಕ್ಷೇತ್ರದಿಂದ ಕುತ್ತಾರಿನ ಕೊರಗಜ್ಜನ ಅಧಿಕ್ಷೇತ್ರಕ್ಕೆ ನಮ್ಮ ನಡೆ” ಎಂಬ ಧಾರ್ಮಿಕ ವೇದಿಕೆಯಲ್ಲಿ ಗೂಂಡಾ ಶರಣ್ ಪಂಪವೆಲ್ ಹಾಗೂ ಚಕ್ರವರ್ತಿಯ ಕೋಮು ಭಾಷಣವನ್ನು ಕೇಳಿಯೂ ಮೌನಕ್ಕೆ ಜಾರಿದ ಹಿಂದೂ ಸಮಾಜದ ನಡೆ ದುರಂತವೇ ಸರಿ.
ಧರ್ಮಸ್ಥಳದ ಸೌಜನ್ಯಲಿಗಾಗಿ ಮಿಡಿಯದ, ಪ್ರವಾಸಕ್ಕೆ ಬಂದ ವಿದೇಶಿ ಮಹಿಳೆಯನ್ನು ಅತ್ಯಾಚಾರವೆಸಗಿ ಹಿಂದೂ ಧರ್ಮಕ್ಕೆ ಕಳಂಕ ತಂದ ಹಿಂದೂ ಕಾಮುಕರ ಬಗ್ಗೆ ತುಟಿಬಿಚ್ಚದ, ಇಪ್ಪತ್ತೊಂದು ಹಿಂದೂ ಹೆಣ್ಣು ಮಕ್ಕಳ ಬಾಳಲ್ಲಿ ಕತ್ತಲು ತುಂಬಿದ ಕಾಮುಕ ಮೋಹನ್ ಕುಮಾರ್’ ಎಂಬಾತನ ಬಗ್ಗೆ ಮಾತಾಡದೇ ಇನ್ನೊಂದು ಸಮುದಾಯವನ್ನು ಗುರಿಮಾಡಿ ಮಾಡಿದ ದ್ವೇಷ ಭಾಷಣವು ಮತ್ತೊಮ್ಮೆ ಕರಾವಳಿಯನ್ನು ಕರಾಳವಾಗಿಸುವ ಕದ ತಟ್ಟುತ್ತಿದೆ,
ಹಣವಂತರ ಕಾಮದ ದಾಹಕ್ಕೆ ಬಲಿಯಾಗಿರುವ, ತನ್ನದೇ ಧರ್ಮದ ಯುವಕರು ಬೀದಿ ಬೀದಿಗಳಲ್ಲಿ ಕುಡಿದು ಬೀಳುತ್ತಾ, ಗಾಂಜಾ ವ್ಯಾಸನಕ್ಕೆ ಬಲಿಯಾಗುತ್ತಿರುವ ತನ್ನದೇ ಧರ್ಮದ ಯುವಪೀಳಿಗೆಯ ಬಗ್ಗೆ ಇನಿತೂ ಕನಿತರ ತೋರದ, ದೇವಸ್ಥಾನದಲ್ಲಿ ನಡೆಯುವ ಅಕ್ರಮದ ಬಗ್ಗೆಧ್ವನಿ ಎತ್ತಿದ ತನ್ನದೇ ಧರ್ಮದ “ಬಾಳಿಗ” ಎಂಬ ಯುವಕನನ್ನು ಕೊಲ್ಲಲು ತೆರೆಮರೆಯಲ್ಲಿ ಕೈ ಜೋಡಿಸಿದ ಇಂತಹ ವ್ಯಕ್ತಿಗಳನ್ನು ನಾಯಕರು ಎಂದು ಹಿಂದೂ ಸಮಾಜ ಒಪ್ಪುವುದಾದರೂ ಹೇಗೆ? ಎಂದು ಅವರು ಕಿಡಿ ಕಾರಿದರು.
ಧಾರ್ಮಿಕತೆ ಬೋಧಿಸಬೇಕಾದ ಕಡೆಯಲ್ಲಿ ಮುಸ್ಲಿಮರನ್ನೇ ಗುರಿಯಾಗಿಸಿ ಅವಹೇಳನಕಾರಿ ಭಾಷಣ ಮಾಡುವ ಇಂತಹ ಕೋಮು ಕ್ರಿಮಿಗಳ ವಿರುದ್ದ ಮತ್ತು ಇವರುಗಳನ್ನು ಕರೆದು ರಾಜ್ಯದ ಸೌಹಾರ್ದ ಕೆಡವುವ ಆಡಳಿತ ಮಂಡಳಿಯ ವಿರುದ್ಧವೂ ಸರಕಾರ ಸೂಕ್ತ ಕ್ರಮ ಕೈಗೊಂಡು ಇಂತಹ ಕುಳಗಳಿಂದ ಬುದ್ದಿವಂತರ ಜಿಲ್ಲೆಗೆ ಅಂಟಿದ ಬುದ್ದಿಮತ್ತೆಯ ಸೋಂಕನ್ನು ಸಂಪೂರ್ಣವಾಗಿ ಅಳಿಸಬೇಕೆಂದು ಆಗ್ರಹಿಸಿದ್ದಾರೆ,