ಪುತ್ತೂರು, ಸೆ.11: ಕೋಳಿ ಸಾಗಾಟದ ಲಾರಿ ಮತ್ತು ಕಾರು ನಡುವೆ ಅಪಘಾತ ಸಂಭವಿಸಿದ ಘಟನೆ ಸಂಪ್ಯದಲ್ಲಿ ನಡೆದಿದೆ.
ಕಾರಿನ ಟಯರ್ ಬ್ಲಾಸ್ಟ್ ಆಗಿ ಅಪಘಾತ ಸಂಭವಿಸಿದ್ದು ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಪುತ್ತೂರಿನಿಂದ ಕುಂಬ್ರ ಕಡೆ ಬರುತ್ತಿದ್ದ ಕಾರು(KA19 MK 4003) ಮತ್ತು ಪುತ್ತೂರು ಕಡೆ ಕೋಳಿ ಸಾಗಾಟ ಮಾಡುತ್ತಿದ್ದ ಲಾರಿ(KA19 AD3215) ನಡುವೆ ಸಂಪ್ಯ ಪೊಲೀಸ್ ಠಾಣೆಯ ಸ್ವಲ್ಪ ಮುಂಭಾಗ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಕಾರಿನ ಎರಡು ಏರ್ ಬ್ಯಾಗ್ ಓಪನ್ ಆಗಿದ್ದು, ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.