ಮಂಗಳೂರು,ಸೆ 10: ದಕ್ಷಿಣ ಕನ್ನಡ ಜಿಲ್ಲಾ ಅಝ್ಹರೀಸ್ ಅಸೋಸಿಯೇಷನ್ ವಾರ್ಷಿಕ ಸಭೆ ಹಾಗೂ ಶೈಖುನಾ ಮಿತ್ತಬೈಲ್ ಉಸ್ತಾದರ ಅನುಸ್ಮರಣಾ ಸಂಗಮವು ಸೆಪ್ಟೆಂಬರ್ 7 2021 ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಆಸಿಫ್ ಅಝ್ಹರಿಯವರ ಪ್ರಾರ್ಥನೆಯೊಂದಿಗೆ ಮಿತ್ತಬೈಲ್ ಉಸ್ತಾದರ ಖಬರ್ ಝಿಯಾರತ್ ನಡೆಸುವ ಮೂಲಕ ಆರಂಭಗೊಂಡಿತು.
ಕರ್ನಾಟಕ ರಾಜ್ಯ ಅಝ್ಹರೀಸ್ ಅಧ್ಯಕ್ಷರಾದ ನಝೀರ್ ಅಝ್ಹರಿ ಬೊಳ್ಮಿನಾರ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದರು.
ಅಝ್ಹರೀಸ್ ಸಂಘಟನೆಯ ಅನಿವಾರ್ಯತೆಯನ್ನು ಕುರಿತು ರಝಾಕ್ ಅಝ್ಹರಿ ಮಾತನಾಡಿದರು. ಬಶೀರ್ ಅಝ್ಹರಿ ಸಭೆಯನ್ನು ಉದ್ಘಾಟಿಸಿದರು. ಬಳಿಕ ಶೈಖುನಾ ಮಿತ್ತಬೈಲ್ ಉಸ್ತಾದರ ಕುರಿತು ವಾಗ್ಮಿ ಉಬೈದುಲ್ಲಾ ಅಝ್ಹರಿ ಪಾಂಡವರಕಲ್ಲು ಅನುಸ್ಮರಣೆ ನಡೆಸಿದರು. ತಹ್ಲೀಲ್ ಹಾಗೂ ದುಃಆ ನಡೆಸಿ 2021-22 ನೇ ಸಾಲಿನ ನೂತನ ಸಮಿತಿಯು ರಚನೆಯಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ರಝಾಕ್ ಅಝ್ಹರಿ ಸವಣೂರು, ಉಪಾಧ್ಯಕ್ಷರಾಗಿ ಅಬ್ದುಲ್ ಜಬ್ಬಾರ್ ಅಝ್ಹರಿ ಚೆನ್ನಾವರ ಉಬೈದುಲ್ಲಾ ಅಝ್ಹರಿ ಪಾಂಡವರಕಲ್ಲು, ಇಸ್ಮಾಯಿಲ್ ಅಝ್ಹರಿ ಮಾರಿಪ್ಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಫಯಾಝ್ ಅಝ್ಹರಿ ಕುಂತೂರು, ಜೊತೆ ಕಾರ್ಯದರ್ಶಿಯಾಗಿ ಶಫೀಕ್ ಅಝ್ಹರಿ ಕಕ್ಕಿಂಜೆ, ಶರೀಫ್ ಅಝ್ಹರಿ ತಿಂಗಳಾಡಿ, ಸಿದ್ದೀಖ್ ಅಝ್ಹರಿ ಬಂಗೇರಕಟ್ಟೆ, ಕೊಶಾಧಿಕಾರಿಯಾಗಿ ಅನ್ವರ್ ಅಝ್ಹರಿ ಬಂಟ್ವಾಳ, ಸಂಘಟನಾ ಕಾರ್ಯದರ್ಶಿಯಾಗಿ ಬಶೀರ್ ಅಝ್ಹರಿ ಸಾಂಬಾರುತೋಟ, ವರ್ಕಿಂಗ್ ಕಾರ್ಯದರ್ಶಿಯಾಗಿ ಷಹಜಹಾನ್ ಅಝ್ಹರಿ ಪಾಲ್ತಾಡ್ ಬೆಳ್ಳಾರೆ, ಮುನೀರ್ ಅಝ್ಹರಿ ಕುಂಬ್ರ, ರಫೀಕ್ ಅಝ್ಹರಿ ಮೈಂದಾಲ ಬಂಟ್ವಾಳ, ಮೀಡಿಯಾ ವಿಂಗ್- ನೌಶದ್ ಅಝ್ಹರಿ ದುಗ್ಗಲಡ್ಕ, ಸವಾದ್ ಅಝ್ಹರಿ ಕಲಾಯಿ, ನೌಶದ್ ಅಝ್ಹರಿ ಕಕ್ಕಿಂಜೆ, ತಸ್ರೀಫ್ ಅಝ್ಹರಿ ಗುರುಪುರ ಆಯ್ಕೆಯಾದರು.
ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಅಝ್ಹರಿ ಪಂಡಿತರು ಕಾರ್ಯಕ್ರಮಕ್ಕೆ ಹೊಸ ಹುರುಪು ನೀಡಿದರು.
ಫಯಾಝ್ ಅಝ್ಹರಿ ಕುಂತೂರು ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶಫೀಕ್ ಅಝ್ಹರಿ ಕಕ್ಕಿಂಜೆ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ರಝಾಕ್ ಅಝ್ಹರಿ ಸವಣೂರು ಸಭೆಯನ್ನು ನಿರೂಪಿಸಿದರು.