ಉಪ್ಪಿನಂಗಡಿ: ಶ್ರೀ ಗೋಪಾಲಕೃಷ್ಣ ಆಡಳಿತ ಸಮಿತಿ ಅಧ್ಯಕ್ಷ ನಾಗಪುರುಷನ್ ರಾವ್ ರವರು ತೆಕ್ಕಾರು ಮುಸ್ಲಿಂ ಒಕ್ಕೂಟಕ್ಕೆ ಪತ್ರ ಬರೆದ ಬೆನ್ನಲ್ಲೇ ಭಜರಂಗದಳ ನೇತೃತ್ವದಲ್ಲಿ ಇಂದು ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಸಂಪೂರ್ಣವಾಗಿ ಅಲ್ಲೆಗೈದಿದ್ದಾರೆ.
ಅಂತಹ ಸೌಹಾರ್ದ ಸಭೆಯೇ ನಾವು ನಡೆಸಿಲ್ಲ ಎಂದು ಆಡಳಿತ ಸಮಿತಿ ಹೇಳಿವೆ.

ಇದರ ಬೆನ್ನಲ್ಲೇ ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿ ಮತ್ತು ಕೋಶಧಿಕಾರಿ ಹಾಗು ದೇವಸ್ಥಾನದ ಆಡಳಿತ ಸಮಿತಿ ಸದಸ್ಯರೊಂದಿಗೆ ಎರಡು ದಿನಗಳ ಮುಂಚೆ ತೆಕ್ಕಾರಿನ ಮುಸ್ಲಿಂ ಮುಖಂಡರು ಸಭೆ ನಡೆಸಿದ ಫೋಟೋ ವೈರಲ್ ಆಗಿದೆ.
ಮುಸ್ಲಿಮರಿಗೆ ಬರೆದ ಪತ್ರದಲ್ಲೇನಿತ್ತು?
ದೇವಸ್ಥಾನದ ಅಧ್ಯಕ್ಷರೇ ಮುಸ್ಲಿಂ ಬಾಂದವರಿಗೆ ಪತ್ರ ಬರೆದಿದ್ದು ಬ್ರಹ್ಮಕಲಶದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಡಿರುವ ಕೆಲವು ಮಾತುಗಳು ಗ್ರಾಮಸ್ಥರ ಮನಸ್ಸಿಗೆ ಬೇಸರ ತಂದಿದೆ.
ಇದಕ್ಕೆ ದೇವಸ್ಥಾನ ಆಡಳಿತ ಮಂಡಳಿಯಿಂದ ವಿಷಾದ ವ್ಯಕ್ತಪಡಿಸುತ್ತದೆ.
ಹಾಗೆಯೇ ನಿಮ್ಮ ಸಮುದಾಯದ ಸಹಕಾರವನ್ನು ಆಡಳಿತ ಮಂಡಳಿಯವರು ಸ್ವಾಗತಿಸುತ್ತೇವೆ.
ಮುಂದೆಯೂ ಸಹ ಎಲ್ಲಾ ಸಮುದಾಯದವರು ಒಬ್ಬರಿಗೊಬ್ಬರು ಸಹಕಾರದೊಂದಿಗೆ ಬದುಕಬೇಕೆಂಬುವುದು ನಮ್ಮ ಆಶಯ.
ಎಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ತನ್ನ ಅಧಿಕೃತ ಲೆಟರ್ ಹೆಡ್ ನಲ್ಲಿ ಬರೆದು ಮುಸ್ಲಿಮರಿಗೆ ಐಕ್ಯ ಸಂದೇಶವನ್ನು ರವಾಣಿಸಿತ್ತು.
ಇದೀಗ ಇಂದು ಭಜರಂಗದಳ ನಡೆಸಿದ ಸಭೆಯಲ್ಲಿ ಇಂತಹ ಯಾವುದೇ ಸಭೆ ನಡೆಸಿಲ್ಲ ವಿಷಾದವೂ ವ್ಯಕ್ತಪಡಿಸಿಲ್ಲ ಎಂದಿದೆ.
ಭಜರಂಗದಳದ ಈ ಹೇಳಿಕೆ ಬೆನ್ನಲ್ಲೇ ತೆಕ್ಕಾರಿನ ಮುಸ್ಲಿಂ ಒಕ್ಕೂಟದ ಸದಸ್ಯರ ಜೊತೆಗಿರುವ ದೇವಸ್ಥಾನದ ಆಡಳಿತ ಸಮಿತಿಯವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಂದಿನ ಸಭೆಯಲ್ಲಿ ಬ್ರಹ್ಮಕಲಶದಂದು ಮುಸ್ಲಿಂ ಸಮುದಾಯಕ್ಕೆ ಉಂಟಾದ ನೋವಿಗೆ ವಿಷಾದ ವ್ಯಕ್ತಪಡಿಸುತ್ತೇವೆ.
ನಾವು ಒಗ್ಗಟ್ಟಿನಲ್ಲಿರಬೇಕು ಮೊನ್ನೆ ಆದಂತಹ ನೋವಿಗೆ ಕ್ಷಮೆಯಿರಲಿ ಎಂದು ಅಂದಿನ ಸೌಹಾರ್ದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಎನ್ನಲಾಗಿದೆ.


ವೈರಲ್ ಆದ ಫೋಟೋದಲ್ಲಿ ಗೋಪಾಲಕೃಷ್ಣ ದೇವಸ್ಥಾನದ ಅಧ್ಯಕ್ಷರಾದ ನಾಗ ಪುರುಷನ್ ರಾವ್,. ಕಾರ್ಯದರ್ಶಿ ಪ್ರವೀಣ್ ರೈ , ಕೋಶಾದಿಕಾರಿ ಅಣ್ಣು ಪೂಜಾರಿ, ಕಾರ್ಯಧ್ಯಕ್ಷ ಲಕ್ಷ್ಮಣ ನಾಯ್ಕ್,
ಸದಸ್ಯರಾದ ಸುರೇಶ ,ಸದಾನಂದ ಬಾಜಾರ,. ತುಕರಾಮ್ ನಾಯ್ಕ್.
ಮುಸ್ಲಿಂ ಒಕ್ಕೂಟದ ಅಬ್ದುಲ್ ರಝಕ್,ಅಬ್ದುಲ್ ರಹಿಮಾನ್ ಎನ್ ಎಚ್, ಎಸ್ ಬಿ ಇಬ್ರಾಹಿಂ,ಅಬ್ದುಲ್ ರಹಿಮಾನ್ ಭಟ್ರಬೈಲ್, ಹುಸೈನ್ ಬಾಜಾರ ಈ ಸೌಹಾರ್ದ ಸಭೆಯಲ್ಲಿದ್ದರು.