ಡಿಟಿವಿ ಕನ್ನಡ: ಪುತ್ತೂರು ತಾಲೂಕಿನ ಕುಂಬ್ರ ಪರಿಸರದಲ್ಲಿ ಹಲವಾರು ವರ್ಷಗಳ ಕಾಲ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಬೀಡಿ ಕಟ್ಟಲು ಅವಕಾಶ ಮಾಡಿ ಕೊಟ್ಟು ಹೆಚ್ಚಿನ ಬಡತನಕ್ಕೆ ಆಸರೆಯಾಗಿದ್ದ ಸಂಪ್ಯದ ಬೀಡಿ ಅಝೀಚ್ಚ ಕಳೆದ ಎರಡು ದಿನಗಳ ಹಿಂದೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ದಶಕಗಳ ಹಿಂದೆ ಬಡತನ,ಉದ್ಯೋಗ ಕೊರತೆ ಇರುವಂತಹ ಸಂದರ್ಭದಲ್ಲಿ ಕುಂಬ್ರಕ್ಕೆ ಬಂದು ಇಲ್ಲಿನ ಸುತ್ತಮುತ್ತಲ ಪರಿಸರದಲ್ಲಿರುವ ಅನೇಕ ಬಡ ಕುಟುಂಬ ಮಧ್ಯಮ ವರ್ಗದವರಿಗೆ ಬೀಡಿ ಕಟ್ಟುವ ಉದ್ಯೋಗ ಕೊಟ್ಟು ಕಷ್ಟ ಕಾಲದಲ್ಲಿ ಜೀವನ ಸಾಗಿಸಲು ಇವರ ಈ ಉದ್ಯೋಗ ಹಲವಾರು ಕುಟುಂಬಗಳಿಗೆ ನೆರವಾಗುತ್ತಿದ್ದು ಇದೀಗ ಅವರು ಅಗಲುವಿಕೆಯ ವಾರ್ತೆ ಕೇಳಿ ಇವರ ಜೊತೆ ಬೀಡಿ ವ್ಯವಹಾರ ನಡೆಸುತ್ತಿದ್ದ ಜನ ದುಃಖದ ಕಡೆ ಮುಖ ಮಾಡಿದ್ದಾರೆ.
ಹತ್ತಿಪ್ಪತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಕುಂಬ್ರ ಪರಿಸರದಲ್ಲಿ ಬೀಡಿ ವ್ಯಾಪಾರದಲ್ಲಿ ತೊಡಗಿಸಿಕೊಂಡು ಬೀಡಿ ಅಝೀಚ್ಚ ಎಂದೆ ಹೆಸರುವಾಸಿಯಾಗಿದ್ದು ಇದೀಗ ಅಲ್ಪ ಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ ಎನ್ನಲಾಗಿದೆ.