';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>ಬಂಟ್ವಾಳ: ಇಲ್ಲಿನ ಬೋಳಂತೂರು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ತುಳಸೀವನದಲ್ಲಿ ಇಂದು ಗಣೇಶೋತ್ಸವ ಕಾರ್ಯಕ್ರಮವನ್ನು ಬಹಳ ಸರಳವಾಗಿ ಆಚರಿಸಲಾಯಿತು.
ನಾಡಿನೆಲ್ಲೆಡೆ ಇಂದು ಗಣೇಶ ಚತುರ್ಥಿ ಹಬ್ಬದ ವಾತಾವರಣ ಕಂಡು ಬಂದಿದ್ದು, ಶ್ರೀ ಸಿದ್ಧಿವಿನಾಯಕ ದೇವಸ್ಥಾನ ತುಳಸೀವನದಲ್ಲಿ ವರ್ಷಂಪ್ರತಿ ಅದ್ದೂರಿಯಾಗಿ ಎರಡು ದಿನ ವಿಘ್ನ ನಿವಾರಕನಿಗೆ ಪೂಜೆ ನೆರವೇರಿಸಲಾಗುತ್ತಿತ್ತು. ಆದರೆ ಈ ವರ್ಷ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸರಕಾರ ಆದೇಶ ಹೊರಡಿಸಿರುವ ಕಾರಣ ಇಂದು ಅತ್ಯಂತ ಸರಳವಾಗಿ ಗಣೇಶೋತ್ಸವ ಕಾರ್ಯಕ್ರಮವನ್ನು ಮಾಡಲಾಯಿತು.
ಬೆಳಿಗ್ಗೆ ಗಣೇಶ ಮೂರ್ತಿಯ ಪ್ರತಿಷ್ಟಾಪನೆ ಮಾಡಿ ಪೂಜೆ ಹೋಮಗಳನ್ನು ಮಾಡಿ ಮದ್ಯಾಹ್ನ ಮಂಗಳಾರತಿ ಮಾಡಲಾಯಿತು. ನಂತರ ಗಣೇಶನನ್ನು ಮೆರವಣಿಗೆ ಮೂಲಕ ವಿಸರ್ಜನೆಗೆ ಕೊಂಡೊಯ್ಯಲಾಯಿತು.