ಪುತ್ತೂರು: ಬ್ಲಾಕ್ ಕಾಂಗ್ರೆಸ್ ಮತ್ತು ಪುತ್ತೂರು ನಗರ ಕಾಂಗ್ರೆಸ್ ವತಿಯಿಂದ ಗೋಲಿಕಟ್ಟೆ ಬೂತ್, ವಾರ್ಡ್ ಮತ್ತು ವಲಯ ಸಮಿತಿ ಸಭೆಯು ನಗರಸಭೆ ವ್ಯಾಪ್ತಿಯ ಗೋಳಿಕಟ್ಟೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಹುಸೈನರ್ ಹಾಜಿ, ಖಾದರ್ ಹಾಜಿ ಮತ್ತು ಯೂತ್ ಕಾಂಗ್ರೆಸ್ ಸದಸ್ಯ ಅಲಿ ಪರ್ಲಡ್ಕ ರವರಿಗೆ ಗಣ್ಯರ ಸಮ್ಮುಖದಲ್ಲಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ 13 ಪದಾಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಮಾಜಿ ಕಾಂಗ್ರೆಸ್ ಮುಖಂಡ ಮೂಸಾ ಹಾಜಿ ಕುಂಜೂರು, ಉಪಾಧ್ಯಕ್ಷರಾಗಿ ಅಶ್ರಫ್ ಗೋಲಿಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ತ್ವಾಹ ಗೋಲಿಕಟ್ಟೆ ಎಂಬವರನ್ನು ಆಯ್ಕೆ ಮಾಡಲಾಯಿತು. ಇನ್ನೂ ಹಲವು ಖಾತೆಗಳು ಬಾಕಿಯಿದ್ದು, ಅದನ್ನು ಮುಂದಿನ ಬೂತ್ ಸಮಿತಿ ಸಭೆಯಲ್ಲಿ ಹಂಚಿಕೆ ಮಾಡಲಾಗುವುದು ಎಂದು ತೀರ್ಮಾನಿಸಲಾಯಿತು.
ಚುನಾವಣೆಯ ಹಿತದೃಷ್ಟಿಯಿಂದ ಪಕ್ಷವನ್ನು ಸಂಘಟನೆ ಮಾಡುವುದು ಮತ್ತು ಗ್ರಾಮದ ಪ್ರತೀ ಮನೆಗಳಲ್ಲೂ ಪಕ್ಷದ ಬಗ್ಗೆ ಪ್ರಚಾರ ನಡೆಸಲು ಪ್ರತೀ ಬೂತ್ ಸಮಿತಿಗಳ ಪದಾಧಿಕಾರಿಗಳಿಗೆ ತರಬೇತಿಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಂ.ಬಿ ವಿಶ್ವನಾಥ ರೈ ಅಧ್ಯಕ್ಷರು ಪುತ್ತೂರು ಬ್ಲಾಕ್ ಕಾಂಗ್ರೆಸ್, ಯಚ್ ಮಹಮ್ಮದ್ ಅಲಿ ಅಧ್ಯಕ್ಷರು ಪುತ್ತೂರು ನಗರ ಬ್ಲಾಕ್ , ಶಕೂರ್ ಹಾಜಿ ಪುತ್ತೂರು ತಾಲೂಕು ಅಲ್ಪಸಂಖ್ಯಾ ಘಟಕದ ಅಧ್ಯಕ್ಷರು, ಫೈರೋಝ್ NRI, ಯಜಾಝ್ ಗೋಲಿಕಟ್ಟೆ, ಅಯ್ಯೂಬ್ ಪರ್ಲಡ್ಕ, ಅಸ್ಲಾಂ, ಮೂಸಾ ಹಾಜಿ, ಅದ್ಲಚ್ಚ ಗೋಲಿಕಟ್ಟೆ, ಸಿನಾನ್ ಗೋಲಿಕಟ್ಟೆ ಪರ್ಲಡ್ಕ, ಜಲೀಲ್ ಗೋಲಿಕಟ್ಟೆ ಹಾಗೂ ಹಲವು ಮುಖಂಡರು, ಗೋಳಿಕಟ್ಟೆ ವಾರ್ಡ್ ಸದಸ್ಯರು ಉಪಸ್ಥಿತರಿದ್ದರು
ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್ ಸ್ವಾಗತಿಸಿ, ವಂದಿಸಿದರು.