ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಯೊಬ್ಬಳನ್ನು ಬೆದರಿಸಿ ನಿರಂತರ ಅತ್ಯಾಚಾರ ನಡೆದ ಅಮಾನವೀಯ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಅನಿಲ್ ಎಂಬ ಯುವಕ ಬಾಲಕಿ ಬಟ್ಟೆ ಬದಲಿಸುವ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಒಡ್ಡಿದ್ದ. ವಿಡಿಯೋ ಮುಂದಿಟ್ಟುಕೊಂಡು ಬಾಲಕಿಗೆ ಬೆದರಿಸಿ 2 ತಿಂಗಳಿನಿಂದ ನಿರಂತರ ಅತ್ಯಾಚಾರ ಎಸಗಿದ್ದ ಎಂದು ದೂರು ದಾಖಲಾಗಿದೆ. ಅನಿಲನ ಹೀನ ಕೃತ್ಯಕ್ಕೆ ಗ್ರಾಮದ ಕಾರ್ತಿಕ್ ಎಂಬಾತ ಬೆಂಬಲ ನೀಡಿದ್ದ. ಅಲ್ಲದೇ ವಿಡಿಯೋ ನೋಡಿದ್ದ ಬಾಲಾಜಿ, ಅಖಿಲೇಶ್ ಎಂಬ ಯುವಕರು ಅಪ್ರಾಪ್ತೆಗೆ ರಸ್ತೆಯಲ್ಲಿ ಕೀಟಲೆ ಕೊಡುತ್ತಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ.
ಅಪ್ರಾಪ್ತ ಸಂತ್ರಸ್ತೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳಲ್ಲಿ ಅನಿಲ್ ನಾಯ್ಕ, ಬಾಲಾಜಿ ಎಂಬ ಇಬ್ಬರನ್ನು ಬಂಧಿಸಿದ್ದಾರೆ.