ಬೆಳ್ತಂಗಡಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) ಎಸ್ಸೆಸ್ಸೆಫ್ ದ.ಕ ಜಿಲ್ಲೆ ಈಸ್ಟ್ ಇದರ ರಿವ್ಯೂ ಅವಲೋಕನ ಸಭೆಯು ದ.ಕ ಜಿಲ್ಲಾಧ್ಯಕ್ಷ ಜಿ.ಕೆ ಇಬ್ರಾಹಿಂ ಅಮ್ಜದಿಯವರ ಅಧ್ಯಕ್ಷತೆಯಲ್ಲಿ ಹಿದಾಯತುಲ್ ಇಸ್ಲಾಂ ಮದರಸ ಹಾಲ್ ಜಾರಿಗೆಬೈಲ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷ ರಫೀಕ್ ಮುಸ್ಲಿಯಾರ್ ನೆರವೇರಿಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲೆ ಈಸ್ಟ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ವರದಿ ವಾಚಿಸಿ, ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರು ಕ್ಯಾಂಪಸ್ ವರದಿ, ಹಾಗೂ ಕೋಶಾಧಿಕಾರಿ ಮುಹಮ್ಮದ್ ಶರೀಫ್ ಬೆರ್ಕಳ ಲೆಕ್ಕಪತ್ರವನ್ನು ಮಂಡಿಸಿದರು.
ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಹುಸೈನ್ ಸಅದಿ,ಹೊಸ್ಮಾರು ಸಭೆಯ ವೀಕ್ಷಕರಾಗಿದ್ದರು.ಈ ಅವಲೋಕನ ಸಭೆಯಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು, ಕೌನ್ಸಿಲರ್ ಗಳು ಭಾಗವಹಿಸಿದ್ದರು.ಕ್ಯಾಬಿನೆಟ್ ಸದಸ್ಯ ಎಂ.ಎ ಪೈಝಲ್ ಝಹ್ರಿ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಳಿಕೆ ವಂದಿಸಿದರು