ಸುಳ್ಯ : ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೀತಿಸಿ ಬಳಿಕ ಮನೆಯಿಂದ ಕರೆದುಕೊಂಡು ಹೋಗಿ ಪುಸಲಾಯಿಸಿ ಅತ್ಯಾಚಾರ ನಡೆಸಿದ ಘಟನೆ ಸುಳ್ಯ ತಾಲೂಕಿನ ಮುಂಡೆಕೋಲು ಎಂಬಲ್ಲಿ ನಡೆದಿದೆ.
ಯುವತಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು, ಯುವತಿಯ ಮನೆಯವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.ಬಂಧಿತ ಯುವಕನನ್ನು ಸುಳ್ಯ ಮಂಡೆಕೋಲು ಗ್ರಾಮದ ಸೋರೆಂಜಾ ನಿವಾಸಿ ಜಿತೇಶ್ ಎಂದು ಗುರುತಿಸಲಾಗಿದೆ.
ಆರೋಪಿ ಯುವಕ ಬಾಲಕಿಯನ್ನು ಇನ್ಸ್ಟಾಗ್ರಾಮ್ ನಲ್ಲಿ ಪರಿಚಯಿಸಿಕೊಂಡು ಪ್ರೀತಿಯ ನಾಟಕವಾಡತೊಡಗಿದ್ದ. ಯುವಕನ ಪೊಳ್ಳು ಮಾತಿಗೆ ಬಾಲಕಿ ನಂಬಿದ್ದಳು. ಆ ಬಳಿಕ ಆರೋಪಿ ಆಕೆಯನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗುವ ನೆಪದಲ್ಲಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.