ಕುಂಬ್ರ, ಸೆ.16: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಸಮೀಪದ ಪರ್ಪುಂಜ ಬಳಿ ವಿಪರೀತ ಮಳೆಯ ಕಾರಣ ರಸ್ತೆಬದಿಗಳಲ್ಲಿ ನೀರು ತುಂಬಿಕೊಂಡಿದ್ದು, ಪಾದಚಾರಿಗಳಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ನಡೆದಾಡಲು ಕಷ್ಟಕರವಾಗಿದೆ.
ಚರಂಡಿ ಮುಚ್ಚಿ ಹೋಗಿ ಮಳೆ ನೀರು ರಸ್ತೆಯಲ್ಲೇ ನಿಂತ ಕಾರಣ ಪ್ರಯಾಣಿಕರಿಗೆ, ಶಾಲಾ ಮಕ್ಕಳಿಗೆ, ವ್ಯಾಪಾರಸ್ಥರಿಗೆ ಹಾಗೂ ಪಾದಚಾರಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಮಳೆ ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲೇ ನೀರು ನಿಂತ ಕಾರಣ ಡೆಂಗ್ಯೂ ಹಾಗೂ ಇನ್ನಿತರ ಕಾಯಿಲೆಗಳು ಹರಡುವ ಸಾಧ್ಯತೆಗಳು ಹೆಚ್ಚಿವೆ.
ಪಕ್ಕದಲ್ಲೇ ಹಾಲು ಉತ್ಪಾದಕರ ಸಹಕಾರ ಸಂಘದ ಡಿಪೋ ಇದ್ದು, ಇಲ್ಲಿಗೆ ಬರುವ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಸಂಭಂಧಪಟ್ಚ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಕೂಡಲೇ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕಾಗಿ ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

ಸಾರ್ವಜನಿಕರ ಅಭಿಪ್ರಾಯ
ಈ ಅವ್ಯವಸ್ಥೆಯ ಸಮೀಪವೇ ನಮ್ಮ ಹಾಲಿನ ಡಿಪೋ ಇರುವುದರಿಂದ ಈ ಪರಿಸರದಲ್ಲಿ ದಿನದಲ್ಲಿ ಹೆಚ್ಚು ಕಮ್ಮಿ ಎಂದರೂ ೫೦ ರಿಂದ ೬೦ ಜನ ಸೇರುತ್ತಿದ್ದು, ಇಲ್ಲಿ ದುರ್ನಾತ ಬೀರುತ್ತಿದೆ. ಮಾತ್ರವಲ್ಲದೇ ಚರಂಡಿಯಲ್ಲಿ ನಿಂತ ನೀರಿನಿಂದ ಸೊಳ್ಳೆಗಳು ಹೆಚ್ಚುತ್ತಿದ್ದು, ಇಲ್ಲಿ ಬರುವವರಿಗೆ ಅನಾರೋಗ್ಯ ಕಾಡುವ ಭಯವಿದೆ. ಜೊತೆಗೆ ಇಲ್ಲಿ ಸಂಚರಿಸುವ ಪಾದಚಾರಿಗಳಿಗೆ ನಡೆದಾಡಲು ತೊಂದರೆಯಾಗುತ್ತಿದ್ದು ಇದಕ್ಕೆ ಸಂಭಂಧಪಟ್ಟ ಪಂಚಾಯತ್ ಮತ್ತು ಅಧಿಕಾರಿ ವರ್ಗದವರು ಆದಷ್ಟು ಬೇಗ ಎಚ್ಚೆತ್ತು ಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತೇನೆ. -ಶ್ಯಾಂ ಸುಂದರ್ ರೈ ಕೊಪ್ಪಳ ಪರ್ಪುಂಜ ಹಾಲು ಉತ್ಪಾದಕರ ಸಂಘದ ನಿರ್ದೇಶಕರು ಮತ್ತು ಮಾಜಿ ಅಧ್ಯಕ್ಷರು