dtvkannada

'; } else { echo "Sorry! You are Blocked from seeing the Ads"; } ?>

ಟೂತ್ ಪೇಸ್ಟ್ ಎಂದು ತಪ್ಪಾಗಿ ಭಾವಿಸಿ ಇಲಿ ವಿಷದಲ್ಲಿ ಬ್ರಷ್ ಮಾಡಿ ಯುವತಿಯೊಬ್ಬಳು ಮೃತಪಟ್ಟಿರುವ ವಿಚಿತ್ರ ಘಟನೆ ಮುಂಬೈನಲ್ಲಿ ನಡೆದಿದೆ. ಹೀಗೆ ದಾರುಣವಾಗಿ ಸಾವನ್ನಪ್ಪಿರುವ ಹುಡುಗಿಯ ಹೆಸರು ಅಫ್ಸಾನಾ ಖಾನ್(18) ಎಂದು ತಿಳಿದುಬಂದಿದೆ. ಮುಂಬೈ ಧಾರವಿ ಪ್ರದೇಶದಲ್ಲಿ ವಾಸಿಸುತ್ತಿದ್ದ 18 ವರ್ಷದ ಅಫ್ಸಾನಾ ಎಂದಿನಂತೆ ಬೆಳಿಗ್ಗೆ ಹಲ್ಲುಜ್ಜಲು ತೆರಳಿದ್ದಳು. ನಿದ್ದೆ ಕಣ್ಣಿನಲ್ಲಿದ್ದ ಆಕೆ ಟೂತ್ ಪೇಸ್ಟ್​ ಬದಲಿಗೆ ಅದರ ಬಳಿಯಿದ್ದ ಇಲಿ ವಿಷದ ಪೇಸ್ಟ್​ ಅನ್ನು ಬ್ರಷ್​ಗೆ ಹಾಕಿ ಹಲ್ಲುಜ್ಜಿದ್ದಾಳೆ. ತಕ್ಷಣವೇ ವ್ಯತ್ಯಾಸ ಅರಿತ ಆಕೆ ಎಲ್ಲವನ್ನೂ ಉಗುಳಿ ಬಾಯಿಯನ್ನು ತೊಳೆದುಕೊಂಡಿದ್ದಳು. ಆದರೆ ಅಷ್ಟರಲ್ಲಾಗಲೇ ತಲೆ ಸುತ್ತು ಬಂದು ಕೆಳಗೆ ಬಿದ್ದಿದ್ದಾಳೆ.

ತಕ್ಷಣವೇ  ಕುಟುಂಬಸ್ಥರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟೊತ್ತಿಗೆ ತಡವಾಗಿತ್ತು. ವಿಷವು ದೇಹದಲ್ಲಿ ಹರಡಲು ಪ್ರಾರಂಭಿಸಿತು. ಎರಡು ದಿನಗಳ ಚಿಕಿತ್ಸೆಯ ನಂತರ, ಅಫ್ಸಾನಾ ಭಾನುವಾರ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವಿದ್ಯಾಭ್ಯಾಸದಲ್ಲಿ ಮುಂದಿದ್ದ ಅಫ್ಸಾನಾ ಮುಂದಿನ ದಿನಗಳಲ್ಲಿ ಕುಟುಂಬಕ್ಕೆ ನೆರವಾಗುವ ಭರವಸೆ ಮೂಡಿಸಿದ್ದಳು.

'; } else { echo "Sorry! You are Blocked from seeing the Ads"; } ?>

ಇದೀಗ ಮಗಳ ದುರಂತ ಸಾವಿನಿಂದ ಇಡೀ ಕುಟುಂಬ ಶೋಕದಲ್ಲಿದೆ. ಪೊಲೀಸರು ಈ ಘಟನೆಯನ್ನು ಆಕಸ್ಮಿಕ ಸಾವಿನ ಪ್ರಕರಣವಾಗಿ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಸುಲಭವಾಗಿ ಕೈಗೆ ಸಿಗುವಂತಹ ಸ್ಥಳಗಳಲ್ಲಿ ಇಂತಹ ವಿಷಕಾರಿ ವಸ್ತುಗಳನ್ನು ಮನೆಯಲ್ಲಿ ಇಡಬೇಡಿ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!