dtvkannada

ಪುತ್ತೂರು: ಸತ್ಯಶಾಂತ ಪ್ರತಿಷ್ಠಾನ (ರಿ) ಇದರ ವತಿಯಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ 11/9/2021 ರಂದು ವಿಶೇಷ ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು.ಸತ್ಯ ಶಾಂತ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಶಾಂತಾ ಕುಂಟಿನಿಯವರು ಪ್ರಾಸ್ತಾವಿಕ ನುಡಿಗಳನ್ನು ಮಾತಾಡುತ್ತ ಸ್ವಾಗತ ಭಾಷಣ ಮಾಡಿದರು.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸುಳ್ಯದ ಖ್ಯಾತ ಸಾಹಿತಿಗಳು, ಜ್ಯೋತಿಷಿಗಳೂ ಚಲನಚಿತ್ರ ನಿರ್ದೇಶಕರೂ ಆಗಿರುವ ಮತ್ತು ಸುಳ್ಯದ ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷರಾದ ಎಚ್ .ಭೀಮರಾವ್ ವಾಷ್ಠರ್ ರವರು ವಹಿಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಾಹಿತ್ಯ ಸಮಾಜ ಬದಲಾವಣೆಗೆ ಬಲು ಸಹಕಾರಿ ಮತ್ತು ಉತ್ತಮ ಸಾಹಿತ್ಯ ಇತಿಹಾಸವಾಗಿ ಉಳಿಯುವದು. ವಿದ್ಯಾರ್ಥಿಗಳು ಸಾಹಿತ್ಯದ ಕಡೆಗೆ ಹೆಚ್ಚು ಒಲವು ಬೆಳೆಸಿಕೊಂಡು ಸಾಹಿತ್ಯ ಲೋಕದಲ್ಲಿ ಬೆಳೆದು ಬೆಳಗಬೇಕು ಎಂದು ಹೇಳಿದರು.ಸತ್ಯ ಶಾಂತ ಪ್ರತಿಷ್ಠಾನದಿಂದ ಇನ್ನೂ ಇಂತಹ ಉತ್ತಮ ರೀತಿಯ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ಯಾಮ್ ಸುದರ್ಶನ್ ಉಪಸ್ಥಿತರಿದ್ದರು. ಕವಿಗಳಾದ ಮಂಗಳೂರಿನ ಕಥಾಬಿಂದು ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಪಿ.ವಿ ಪ್ರದೀಪ್ ಕುಮಾರ್ ರವರು ಸೈನಿಕ ಕವನ, ದಿಲೀಪ್ ವೇದಿಕ್ ಕಡಬ ರವರು ಕಾಲದ ಮಹಿಮೆ ಕವನ, ರಶ್ಮಿ ಸನಿಲ್’ರವರು ವಿಶ್ವಗುರು ಭಾರತ ಕವನ ಮತ್ತು ಮಾನಸ ಪ್ರವೀಣ್ ಭಟ್ ರವರು ಸಿದ್ಧಿ ವಿನಾಯಕ ಕವನ ವಾಚನ ಮಾಡಿದರು.ಕಾರ್ಯಕ್ರಮವನನ್ನು ಅಪೂರ್ವ ಕಾರಂತ್ ರವರು ನಿರೂಪಿಸಿದರು.

By dtv

Leave a Reply

Your email address will not be published. Required fields are marked *

error: Content is protected !!