ಮಂಗಳೂರು, ಸೆ 17: ಕೊಡಗು ಜಿಲ್ಲಾ ಸಂಯುಕ್ತ ಜಮಾಅತ್ ಸಹಾಯಕ ಖಾಝಿಗಳು, ಸುನ್ನಿ ಜಂಯ್ಯತುಲ್ ಉಲಮಾ ಕರ್ನಾಟಕ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ರಾದ ಎಡಪ್ಪಲಂ ಮಹ್ ಮೂದ್ ಮುಸ್ಲಿಯಾರ್ ಇಂದು ಮಧ್ಯಾಹ್ನ ನಿಧನರಾದರು
ಮರ್ಕಝುಲ್ ಹಿದಾಯ ಕೊಟ್ಟಮುಡಿ ಕೊಡಗು ಇದರ ಅಧ್ಯಕ್ಷರಾಗಿದ್ದ ಮಹ್ಮೂದ್ ಉಸ್ತಾದ್ ಅನಾರೋಗ್ಯ ನಿಮಿತ್ತ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರ ಜನಾಝವನ್ನು ಕೆಜಿಎನ್ ಮಿತ್ತೂರಲ್ಲಿ ಸ್ನಾನ ಮಾಡಿಸಿ ಕೊಡಗಿಗೆ ಕಳುಹಿಸಿಕೊಡಲಾಗುವುದು ಎಂದು ತಿಳಿದು ಬಂದಿದೆ