ಕೋಲಾರ: ಲಾಟರಿ ಆಸೆ ತೋರಿಸಿ ಮಕ್ಕಳನ್ನು ಅಪಹರಣ ಮಾಡುವ ಶಂಕೆ ಕೋಲಾರ ಜಿಲ್ಲೆಯಲ್ಲಿ ವ್ಯಾಪಿಸಿದೆ. ಹೀಗಾಗಿ ಮಕ್ಕಳನ್ನು ಅಪಹರಣ ಮಾಡುತ್ತಿದ್ದಾರೆ ಎಂಬ ಆರೋಪದಡಿ ಮೂವರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಲ್ ಪೇಟೆ ಪೊಲೀಸರು ಸದ್ಯ ಮೂವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರಿಂದ ಲಾಟರಿ ವಸ್ತುಗಳು, ಓಮ್ನಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಓಮ್ನಿಯಲ್ಲಿದ್ದ ಇಬ್ಬರು ಅರೋಪಿಗಳು ಪರಾರಿಯಾಗಿದ್ದು, 5 ಜನ ಮಕ್ಕಳ ರಕ್ಷಣೆ ಮಾಡಲಾಗಿದೆ. ಲೈಟ್, ಫ್ಯಾನ್ , ಪ್ಲಾಸ್ಕ್ , ಕುಕ್ಕರ್, ಹಾಟ್ ಬಾಕ್ಸ್, ಲಾಟರಿ ಆಸೆ ತೋರಿಸಿ ಮಕ್ಕಳನ್ನು ಪುಸಲಾಯಿಸಿರುವ ಆರೋಪಿಗಳು, ಮಕ್ಕಳಿಗೆ ಲಾಟರಿ ಬಂದಿದೆ ಎಂದು ಹೇಳಿ ಓಮ್ನಿ ಕಾರ್ ಬಳಿ ಬರುವಂತೆ ಹೇಳಿದ್ದಾರೆ. ಕಾರ್ ಬಳಿ ಹೋಗುತ್ತಿದ್ದಾಗ ಸ್ಥಳೀಯರ ಸಮಯ ಪ್ರಜ್ಞೆಯಿಂದ ಮಕ್ಕಳ ರಕ್ಷಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.