dtvkannada

ಬಸವನಬಾಗೇವಾಡಿ, ಸೆ.19: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಆಯೋಜಿಸಿದ “ದಿನಕರ ದೇಸಾಯಿ ಸ್ಮರಣೋತ್ಸವ”, ‘ಚುಟುಕು ಕವಿಗೋಷ್ಠಿ” ಹಾಗೂ “ಸಾಕ್ಷರರ ಕಿಚ್ಚು ವಿಡಿಯೋ ಬಿಡುಗಡೆ ” ಕಾರ್ಯಕ್ರಮವು ಗೂಗಲ್ ಮೀಟ್ ಮೂಲಕ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಸವನಬಾಗೇವಾಡಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ಬಸೀರಾಬಾನು ನಿಡಗುಂದಿ, ದಿನಕರ ದೇಸಾಯಿಯವರು ಶ್ರಮಿಕ ಮತ್ತು ಹಾಲಕ್ಕಿ ಹಾಗೂ ದೌರ್ಜನ್ಯ ಅನುಭವಿಸುವ ಎಲ್ಲ ವರ್ಗದ ಜನರ ಬಗ್ಗೆ ಅತೀವ ಕಾಳಜಿ ವಹಿಸುವ ಭಾವಜೀವಿಯಾಗಿದ್ದರು. ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಹಳ್ಳಿಗರ ಬಾಳಿಗೆ ಬೆಳಕಾಗಿದ್ದರು ಎಂದು ಮಾತನಾಡಿದರು. ಇದೆ ಸಂದರ್ಭದಲ್ಲಿ ಮೈಸೂರು ವಿದ್ಯಾರ್ಥಿನಿ ಅತ್ಯಾಚಾರ ಖಂಡಿಸಿ “ಸಾಕ್ಷರರ ಕಿಚ್ಚು” ಯೆಂಬ ಚುಟುಕು ಸಂಗ್ರಹದ ವಿಡಿಯೋ ಲೋಕಾಯುಕ್ತರ್ಪಣೆ ಗೊಳಿಸಿ, ದಿನಕರರ ಕೆಲವು ಚುಟುಕು ವಾಚಿಸಿ ವಿಶ್ಲೇಷಿಸಿದರು.

ಚೌಪದಿ ಚುಟುಕಿನಲ್ಲಿ ಸಾಮಾಜಿಕ ಜೀವನದ ಕ್ರೂರ ಮತ್ತು ಮುಚ್ಚಿಟ್ಟ ಸತ್ಯವನ್ನು ಅನಾವರಣಗೊಳಿಸಿ, ಚುಟುಕು ಬ್ರಹ್ಮರೆಂದು ಕರೆಸಿಕೊಂಡು ಬರೆದಂತೆ ಬಾಳಿದ ದಿ|| ದಿನಕರ ದೇಸಾಯಿಯವರು ನಮಗೆಲ್ಲ ಸ್ಫೂರ್ತಿ ಎಂದು, ಆಧುನಿಕ ವಚನಕಾರರು ,ಮುದ್ದೇಬಿಹಾಳ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ಆಯ್ ಬಿ ಹಿರೇಮಠ (ಕೊಣ್ಣೂರ) ಇವರು ಉಪನ್ಯಾಸ ನೀಡಿದರು. ಪಕ್ಷೇತರರಾಗಿ ಸಂಸದರಾಗಿ ಆಯ್ಕೆಯಾಗಿದ್ದು ಅವರ ಸಾಮಾಜಿಕ ಸ್ಪಂದನೆ ಹೇಗೆ ಇತ್ತು ಎಂಬುದನ್ನು ತಿಳಿಸುತ್ತದೆ. ಇಂದಿನ ಕವಿಗಳು ಹೆಣ್ಣಿನ ಮುಂಗುರುಳು,ಹೂವು, ಹುಡುಗಿ, ಪ್ರೀತಿ, ಕುರಿತು ಕವನ ಬರೆಯುತ್ತಾ ಕಾಲಹರಣ ಮಾಡದೇ ನಾಡಿನ ಜಲ್ವಂತ ಸಮಸ್ಯೆಗಳ ಬಗ್ಗೆ ಲೇಖನಿ ಹಿಡಿದು ಬೆಳಕು ಚೆಲ್ಲಬೇಕು ಎಂದು ನುಡಿದರು.

ಇದೆ ಸಂದರ್ಭದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಕೃಷ್ಣ ಮೂರ್ತಿ ಕುಲಕರ್ಣಿ ಅವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭಕೋರಿ ಬಸವನಬಾಗೇವಾಡಿ ಘಟಕವು ಕ್ರಿಯಾತ್ಮಕ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಯುವ ಕವಿಯತ್ರಿ ಶ್ರೀಮತಿ,ಭಾಗ್ಯಶ್ರೀ ಬಿರಾದಾರ ನರಸಲಗಿ ಇವರು “ಸಾಕ್ಷರರ ಕಿಚ್ಚು”ಅಭಿಯಾನವನ್ನು ಪರಿಚಯಿಸುತ್ತಾ ,ಹೆಣ್ಣಿನ ಮೇಲಿನ ಅತ್ಯಾಚಾರ ಅಕ್ಷಮ್ಯ ಎಂದರು.ಅಕ್ಷರದ ಕಿಚ್ಚು ಕಾಮುಕರನ್ನು ಸುಟ್ಟು ಹಾಕಲಿ ಎಂದರು.

ಕವಿಗಳಾದ ಶ್ರೀ ಮಹೇಶಕುಮಾರ ಶಿರಸಿ, ಶ್ರೀ ಮತಿ ಭಾಗ್ಯ ಚಿತ್ರದುರ್ಗ, ಶ್ರೀ ನಾಗೇಂದ್ರ ಭದ್ರಾವತಿ, ರಶ್ಮೀ ಸನಿಲ್ ಮಂಗಳೂರು, ಶ್ರೀ ಎಲ್. ಹಾಲ್ಯಾನಾಯ್ಕ ವಿಜಯನಗರ, ಎಸ್. ಬಿ. ಕೂಚಬಾಳ ಬೀದರ್, ಕೆ.ಎಮ್.ಗಾಣಿಗೇರ ಬಾಗಲಕೋಟೆ, ಸುರೇಖಾ ಬಿರಾದಾರ ಕಲಬುರಗಿ, ಅಶೋಕ ಚಿಕ್ಕಬಳ್ಳಾಪೂರ, ಅಮೃತಾ ಉಡುಪಿ, ಚರಿತ್ರ ಎಮ್.ಆರ್. ಕೊಡಗು, ವಾಗೀಶ ಶಿವಮೊಗ್ಗ, ಶೇಖರಗೌಡ ವಿಜಯಪುರ, ಶ್ರೀಮತಿ ಗಿರೀಜಾ ಹಿರೇಮಠ ಬೆಳಗಾವಿ, ಶ್ರೀಮತಿ ಭಾರತಿ ಗೊಂಗಡಿ ಸುಮಾರು ಇಪ್ಪತ್ತು ಜನ ಕವಿಗಳು ರಾಜ್ಯದ ವಿವಿಧ ಜಿಲ್ಲೆಯಿಂದ ಭಾಗವಹಿಸಿ ತಮ್ಮ ಚುಟುಕು, ಚಾಟಿ ಬೀಸಿ ಸಮಾಜದಲ್ಲಿ ಮರೆಯಾದ ಮನುಷ್ಯತ್ವ, ಲಂಚ, ರೈತರ ಪರಿಸ್ಥಿತಿ ,ದೇಶ ಪ್ರೇಮ, ಪ್ರೀತಿ, ಹತಾಶೆ, ಮುಖವಾಡ ಇತ್ಯಾದಿ ಅಂಶಗಳ ಮೇಲೆ ಬೆಳಕು ಚೆಲ್ಲಿದರು.
ಬಸವನಾಡಿನ ಬಳಗದ ಪ್ರಮುಖರು ಇದ್ದರು. ಕಚುಸಾಪ ಹಿರಿಯ ಮಾರ್ಗದರ್ಶಕರಾದ ಶ್ರೀ ಎನ್ ಎಸ್ ಹೂಗಾರ, ಶ್ರೀ ಕೆ ಎಸ್ ಅವಟಿ, ಶ್ರೀಮತಿ ಸುಧಾ ಎಂ ರಬಿನಾಳ, ಶ್ರೀ ಜಿ ಎಂ ಹಳ್ಳೂರ, ಶ್ರೀ ದೇವೇಂದ್ರ ಗೋನಾಳ, ಶ್ರೀ ವಾಯ್ ಕೆ ಪತ್ತಾರ ಇದ್ದರು.

ಆನ್’ಲೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಚುಸಾಪ ವಿಜಯಪುರ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಸಾಲಳ್ಳಿಯವರು ಜಿಲ್ಲೆಯಲ್ಲಿ ಬಸವನಬಾಗೇವಾಡಿ ತಾಲೂಕು ಪರಿಷತ್ತು ಒಂದು ವರ್ಷದ ಅವಧಿಯಲ್ಲಿ ಸುಮಾರು 20 ವಿವಿಧ ಅಭಿಯಾನ ಏರ್ಪಡಿಸುವದರ ಜೊತೆಗೆ ,ಹೊಸ ಪ್ರತಿಬೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಶ್ಲಾಗನೀಯ ಎಂದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಚುಸಾಪ ತಾಲೂಕಾ ಅಧ್ಯಕ್ಷರಾದ ಶ್ರೀ ಪ್ರಭಾಕರ ಖೇಡದ ಅವರು ಪರಿಷತ್ತಿನ ಪದಾಧಿಕಾರಿಗಳ ಸಹಕರಿಸುವಿಕೆ ಹಾಗೂ ಎಲೆಮರೆಯ ಕಾಯಿಯಂತೆ ಕೈಗೂಡಿಸುವ ಎಲ್ಲರನ್ನು. ನಮ್ಮ ಘಟಕದ ಎಲ್ಲಾ ಕಾರ್ಯಕ್ರಮಕ್ಕೆ ಪ್ರೋತ್ಸಾಹಿಸುವ ಜಿಲ್ಲಾ ಮತ್ತು ರಾಜ್ಯ ಘಟಕವನ್ನು ನೆಪಿಸುತ್ತಾ ಅಕಾಲಿಕವಾಗಿ ಅಗಲಿದ ಹಿಂದಿನ ಕಚುಸಾಪ ಜಿಲ್ಲಾಧ್ಯಕ್ಷ ಲಿಂ/ಬಂಡೆಪ್ಪ ಜಿ ತೇಲಿಯವರನ್ನು ಸ್ಮರಿಸಿದರು.

ಕಚುಸಾಪ ಸಂಘಟಕರು, ಈ ಕಾರ್ಯಕ್ರಮದ ಪ್ರಮುಖ ಸಂಯೋಜಕರಾದ ಸಾಹಿತಿ ಬಸವರಾಜ ಹಡಪದ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕು.ಅಮರ ಯರಗಟ್ಟಿಕರ ಅವರು ಸ್ವಾಗತ ಮತ್ತು ಪರಿಚಯ ಮಾಡಿದರು. ಹಾನಗಲನ ಕು.ಸ್ಫೂರ್ತಿ ಕಾಳಿ ಇವರು ಪ್ರಾರ್ಥನೆಗೈದರು. ಕು.ಸಂತೋಷ ಪಟೇದ ಇವರು ಗಾನಸುಧೆ ಹರಿಸಿದರು. ಶಿಕ್ಷಕಿಯರಾದ ಶ್ರೀಮತಿ ಅರುಂಧತಿ ಹತ್ತಿಕಾಳ ಇವರು ನಿರೂಪಿಸಿದರು. ಶಿಕ್ಷಕರಾದ ಶ್ರೀ ಅರವಿಂದ್ ಸಜ್ಜನ ಅವರು ವಂದಿಸಿದರು.

By dtv

Leave a Reply

Your email address will not be published. Required fields are marked *

error: Content is protected !!