dtvkannada

ಉಪ್ಪಿನಂಗಡಿ, ಸೆ.20: SSF ತೆಕ್ಕಾರು ಯುನಿಟ್ ವತಿಯಿಂದ ಕರ್ನಾಟಕ ರಾಜ್ಯ SSF ಸಂಘಟನೆಯ 33ನೇ ಧ್ವಜ ದಿನದ ಸಂಭ್ರಮವನ್ನು ಧ್ವಜಾರೋಹಣದ ಮೂಲಕ ಸಂಭ್ರಮದಿಂದ ತೆಕ್ಕಾರು ಮದ್ರಸಾ ವಠಾರದಲ್ಲಿ ಆಚರಿಸಲಾಯಿತು.

32 ವರುಷಗಳ ಹಿಂದೆ ನಮ್ಮ ಪೂರ್ವಿಕರು ಬಂದ, ತ್ಯಾಗಮಯ ಸಂಘಟನಾ ಹೋರಾಟದ ಫಲವಾಗಿದೆ 33ರ ಈ ಸಂಭ್ರಮ, ಸಂಘಟನೆಗಾಗಿ ಆಹೋ ರಾತ್ರಿ ಹೋರಾಡಿದ ನಮ್ಮ ಪೂರ್ವಿಕರನ್ನು ನೆನಪಿಸುವ ಮೂಲಕ ಧ್ವಜ ದಿನವನ್ನು ಅರ್ಥಪೂರ್ಣಗೊಳಿಸಬೇಕೆಂದು SYS ನಾಯಕ ಉಸ್ಮಾನ್ ಸಹದಿ ತೆಕ್ಕಾರು ಸಂದೇಶ ಬಾಷಣ ನಡೆಸಿದರು.

ತೆಕ್ಕಾರು ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷರು M.T ಆದಂ ಬಾಜಾರ್ ಧ್ವಜಾರೋಹಣಗೈದರು. ಮದ್ರಸಾ ಅಧ್ಯಾಪಕರಾದ ಉಸ್ಮಾನ್ ಮುಸ್ಲಿಯಾರ್ ದುಃಆ ನೆರೆವೇರಿಸಿದರು. ಗಲ್ಫ್ ಫ್ರೆಂಡ್ಸ್ ತೆಕ್ಕಾರು ಅಧ್ಯಕ್ಷ ಅಶ್ರಫ್ ಲತೀಫಿ, SSF ಸರಳಿಕಟ್ಟೆ ಸೆಕ್ಟರ್ ನಾಯಕರಾದ ಸಫ್ವಾನ್ ಕನರಾಜೆ, ಫಾರೂಕ್ ಬಾಜಾರ ಆಶಂಸಾ ಬಾಷಣಗೈದರು. SSF ತೆಕ್ಕಾರು ಯುನಿಟ್ ಅಧ್ಯಕ್ಷ ಶರೀಫ್ ಕೆ.ಪಿ ಅಧ್ಯಕ್ಷತೆ ವಹಿಸಿದರು.

ಜಮಾಅತ್ ಕಾರ್ಯದರ್ಶಿ ನಝೀರ್ ಟಿ.ಕೆ, SSF ತೆಕ್ಕಾರು ಯುನಿಟ್ ಕೋಶಾಧಿಕಾರಿ ಜಾಫರ್ ಕೆ.ಪಿ, ಕೆ.ಸಿ.ಎಫ್ ನಾಯಕರಾದ ಬಾಸಿತ್ ಕನರಾಜೆ ಮತ್ತಿತ್ತರು ಉಪಸ್ಥಿತರಿದ್ದರು.
ಕೆ.ಪಿ ಬಾತಿಶ್ ಸ್ವಾಗತಿಸಿದರು, ಆಶಿಕ್ ಟಿ.ಹೆಚ್ ವಂದಿಸಿದರು.

By dtv

Leave a Reply

Your email address will not be published. Required fields are marked *

error: Content is protected !!