ಬೆಳ್ತಂಗಡಿ: ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಸೇವಾ ಟ್ರಸ್ಟ್ ಶಿರ್ಲಾಲು ಕರಂಬಾರು ಗ್ರಾಮ ಸಮಿತಿಯ ವತಿಯಿಂದ ಆಯೋಜಿಸಿದ ಗ್ರಾಮ ಪಂಚಾಯತ್ ಮಟ್ಟದ ಮೈಕ್ರೋಫೈನಾನ್ಸ್ ಸಾಲ ಸಂತ್ರಸ್ತರ ಮಹಿಳೆಯರ ಸಮಾವೇಶ ಇಂದು ಬೆಳಿಗ್ಗೆ ಬಂತಡ್ಕ ವಠಾರದಲ್ಲಿ ನಡೆಯಿತು.
ಮೈಕ್ರೋ ಅಕ್ರಮ ವ್ಯವಹಾರದ ನಿಷೇಧಿಸಲು ಮಹಿಳೆಯರ ಮೈಕ್ರೋ ಸಾಲ ಮನ್ನಾ ಘೋಷಿಸಿ ಮಹಿಳೆಯರ ರಕ್ಷಣೆ ಮಾಡುವ ಬಗ್ಗೆ ಮಹಿಳಾ ದೌರ್ಜನ್ಯ ತಡೆಯುವ ಬಗ್ಗೆ ಶಿರ್ಲಾಲು ಗ್ರಾಮ ಪಂಚಾಯಿತಿಗೆ ಪಿ ಡಿ ಓ ಇವರಿಗೆ ಮನವಿ ಸಲ್ಲಿಸಲಾಯಿತು. ಅದೇ ರೀತಿ ಈ ಸಮಾವೇಶದ ವೇದಿಕೆಯಲ್ಲಿ ಬಿಎಂ ಭಟ್ ರಾಜ್ಯಾಧ್ಯಕ್ಷರು, ಅರುಣ ಶಿರ್ಲಾಲ್, ಹನೀಶ್ ಶಿರ್ಲಾಲ್, ಸಿದ್ದೀಕ್ ಬಂತಡ್ಕ, ಆನಂದ, ಮಹಮ್ಮದ್, ಪ್ರವೀಣ, ಭವ್ಯ ಹಾಗೂ ಮೊದಲಾದವರು ಉಪಸ್ಥಿತರಿದ್ದರು