dtvkannada

ಮಂಗಳೂರು: ಮಂಗಳೂರಿನ ಪೊಲೀಸರಿಬ್ಬರು ತಮ್ಮ ಕರ್ತವ್ಯದ ನಡುವೆಯೂ ಸಮಯಪ್ರಜ್ಞೆಯನ್ನು ಮೆರೆದಿದ್ದಾರೆ. ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಉತ್ತರ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್​ಗಳು ಸಾಮಾಜಿಕ ಕಳಕಳಿ ಮೆರೆದು ಈಗ ಪೊಲೀಸ್ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ನಿನ್ನೆ ಮಂಗಳೂರಿನ ಪಿವಿಎಸ್ ಸರ್ಕಲ್ ಬಳಿ ಪೊಲೀಸ್ ಕಾನ್ಸ್​ಟೇಬಲ್​ಗಳಾದ ಶಂಕರ್ ಮತ್ತು ಸತೀಶ್ ಹೋಗುತ್ತಿದ್ದರು. ಈ ವೇಳೆ ಸರ್ಕಲ್​ನಲ್ಲಿ ಇಂಜಿನ್ ಆಯಿಲ್ ಚೆಲ್ಲಿ ಎರಡು ಮೂರು ಬೈಕ್​ಗಳು ಸ್ಕಿಡ್ ಆಗಿ ಬಿದ್ದುದನ್ನು ಗಮನಿಸಿದ್ದಾರೆ‌. ಮುಂದಿನ ಅಪಾಯವನ್ನು ಅರಿತ ಪೊಲೀಸ್ ಕಾನ್ಸ್​ಟೇಬಲ್​ಗಳಿಬ್ಬರು ಅಲ್ಲಿಗೆ ಮರಳನ್ನು ತರಿಸಿ ಹಾಕಿ ಅದನ್ನು ಗುಡಿಸಿ ಆಯಿಲ್ ಹೋಗುವಂತೆ ಮಾಡಿದ್ದಾರೆ‌‌.

ಪೊಲೀಸ್ ಕಮಿಷನರ್​ನಿಂದ ಮೆಚ್ಚುಗೆ‌!

ಇವರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಕುಮಾರ್ ಅವರು ಪೊಲೀಸ್ ಕಾನ್ಸ್​ಟೇಬಲ್​ಗಳ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಸಿಬ್ಬಂದಿಗಳಾದ ಶಂಕರ್ ಮತ್ತು ಸತೀಶ್ ರನ್ನು ತಮ್ಮ ಕಚೇರಿಗೆ ಕರೆಸಿ ಡಿಸಿಪಿ, ಎಸಿಪಿ ಸೇರಿದಂತೆ ತಮ್ಮ ಸಿಬ್ಬಂದಿಗಳ ಸಮ್ಮುಖದಲ್ಲಿ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!