ಹೈದರಾಬಾದ್: ವೃದ್ಧೆ ಅಭಿಮಾನಿಯೊಬ್ಬಯೊಬ್ಬರ ಆಸೆಯನ್ನು ಮಲಯಾಲಂ ಸ್ಟಾರ್ ನಟ ಮೋಹನ್ ಲಾಲ್ ಈಡೇರಿಸುವ ಮೂಲಕ ತಮ್ಮ ಅವರ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ.
ರುಕ್ಮಿಣಿ ಮಾಮಿಯವರು ಮೋಹನ್ ಲಾಲ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರನ್ನು ನೋಡುವ ಬಯಕೆಯನ್ನು ವೀಡಿಯೋ ಮೂಲಕ ಹೊರಹಾಕಿದ್ದರು. ಈ ಅಜ್ಜಿಯ ವೀಡಿಯೋವನ್ನು ಅಭಿಮಾನಿಗಳು ನಟನಿಗೆ ತಲುಪಿಸಿದ್ದಾರೆ. ಈ ಹೃದಯ ಸ್ಪರ್ಶಿ ವೀಡಿಯೋ ನೋಡಿದ ನಟ, ರುಕ್ಮಿಣಿ ಮಾಮಿಯವರಿಗೆ ವೀಡಿಯೋ ಕಾಲ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
This is why @Mohanlal is the most successful man and most loved malayali.
— Mohanlal Fans Club (@MohanlalMFC) September 20, 2021
He is living in the heart of millions of Mother's Like RUKMINI AMMA.
And this how he responds and care those Mothers ❤️
Paid writers u can't destroy the love of Malayalis towards this MAN ❤️#Mohanlal 🙏 pic.twitter.com/lVJZp4XQQz
ರುಕ್ಮಿಣಿ ಮಾಮಿ ಮೂಲತಃ ಕೇರಳ ತ್ರಿಶೂರಿನ ಪುಂಕನ್ನಂಲ್ಲಿರುವ ಅನಾಥಾಶ್ರಮದಲ್ಲಿ ನೆಲೆಸಿದ್ದಾರೆ. ದೇವಸ್ಥಾನದ ಅರ್ಚಕರಾಗಿದ್ದ ಆಕೆಯ ಪತಿ ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದರು. ಸದಾ ಮೋಹನ್ ಲಾಲ್ ಬಗ್ಗೆ ಮಾತನಾಡುತ್ತಿದ್ದ ಆಕೆಯನ್ನು ಜೊತೆಗಿದ್ದವರು ಚುಡಾಯಿಸುತ್ತಿದ್ದರು. ಇದರ ಬಗ್ಗೆ ಅಳಲು ತೋಡಿಕೊಂಡಿರುವ ರುಕ್ಮಿಣಿ ಮಾಮಿಯ ವೀಡಿಯೋ ಒಂದು ಸೆರೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದನ್ನು ಅರಿತ ನಟ ಮೋಹನ್ ಲಾಲ್, ಅಜ್ಜಿಯ ಜೊತೆ ವೀಡಿಯೋ ಕಾಲ್‍ನಲ್ಲಿ ಮಾತನಾಡಿ ಸಂತಸ ಮೂಡಿಸಿದ್ದಾರೆ. ಅಲ್ಲದೆ ಕೋವಿಡ್ ಕಡಿಮೆಯಾದ ನಂತರ ಅಜ್ಜಿಯನ್ನು ಭೇಟಿಯಾಗುವ ಭರವಸೆಯನ್ನು ಕೂಡ ನೀಡಿದ್ದಾರೆ. ಸದ್ಯ ಹೈದರಾಬಾದ್‍ನಲ್ಲಿ ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುವ ನಟ ಮೋಹನ್ ಲಾಲ್, ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
